×
Ad

ನಾರಾಯಣ ಕುಂದರ್

Update: 2024-01-14 23:55 IST

ಬ್ರಹ್ಮಾವರ: ಬೈಕಾಡಿಯ ನಿವಾಸಿ ಬಿ.ನಾರಾಯಣ ಕುಂದರ್(68) ಅಲ್ಪಕಾಲದ ಅಸೌಖ್ಯದಿಂದ ಜ.13ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದು. ಬಾರ್ಕೂರು ಮತ್ತು ಬ್ರಹ್ಮಾವರ ಶಾಖೆಗಳಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿಯಾಗಿದ್ದರು. ಸ್ಥಳೀಯವಾಗಿ ಹವ್ಯಾಸಿ ಯಕ್ಷಗಾನ ತಂಡ ಕಟ್ಟಿಕೊಂಡು ಯಕ್ಷಗಾನದ ಪೋಷಕರಾಗಿಯೂ ಮತ್ತು ಯಕ್ಷಗಾನ ಕಲಾವಿದರಾಗಿ ಮಹಿಷಾಸುರನ ಪಾತ್ರದಲ್ಲಿ ಮಿಂಚಿದ್ದರು.

ಬೈಕಾಡಿಯ ಮೊಗವೀರ ಗ್ರಾಮ ಸಭೆಯ ಮಾಜಿ ಅಧ್ಯಕ್ಷರಾಗಿದ್ದು, ಬೈಕಾಡಿ ಯುವಕಮಂಡಲ ಮಾಜಿ ಸದಸ್ಯರಾಗಿದ್ದು, ಸ್ಥಳೀಯ ಬೈಕಾಡ್ತಿ ದೈವಸ್ಥಾನದಲ್ಲಿ ತಮ್ಮನ್ನು ದೇವತಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಮೃತರು ಪತ್ನಿ, ಮೂವರು ಪುತ್ರಿಯರು, ಇಬ್ಬರು ಪುತ್ರರನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News