ಮಂಜುನಾಥ ವೈದ್ಯ
Update: 2024-07-26 21:04 IST
ಬೈಂದೂರು, ಜು.26: ನಿವೃತ್ತ ಮುಖ್ಯ ಇಂಜಿನಿಯರ್ ಉಪ್ಪುಂದ ನಿವಾಸಿ ಯು.ಮಂಜುನಾಥ ವೈದ್ಯ(86) ಜು.23ರಂದು ಹೃದಯಾಘಾತದಿಂದ ಸ್ವಗ್ರಹದಲ್ಲಿ ನಿಧನರಾದರು.
ಇವರು ಭೂಮರೆಡ್ಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಮ್ಮ ಇಂಜಿನಿಯರಿಂಗ್ ವ್ಯಾಸಂಗವನ್ನು ಮುಗಿಸಿ ಬೈಂದೂರು, ಗುಲ್ಬರ್ಗ, ಧಾರವಾಡ ಕಾರವಾರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿ ಮುಖ್ಯ ಇಂಜಿನಿಯರ್ ಆಗಿ ಬಡ್ತಿ ಹೊಂದಿ 1997 ಏಪ್ರಿಲ್ ತನಕ ಕೃಷ್ಣ ಮೇಲ್ದಂಡೆ ಯೋಜನೆ ಆಲಮಟ್ಟಿಯಲ್ಲಿ ಸೇವೆ ಸಲ್ಲಿಸಿದ್ದರು.
ನಿವೃತ್ತರಾದ ಬಳಿಕ ಲಯನ್ಸ್ ಕ್ಲಬ್ ಬೈಂದೂರು ಇದರ ಅಧ್ಯಕ್ಷರಾಗಿದ್ದರು. ಕೂಟ ಮಹಾ ಜಗತ್ತು, ಬ್ರಾಹ್ಮಣ ಪರಿಷತ್ತು ಹಲವು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.