×
Ad

ಬೆಂಜಮಿನ್ ಡಿಸೋಜ

Update: 2024-07-27 19:11 IST

ಮಂಗಳೂರು: ಶಿಕ್ಷಣ, ಉದ್ಯಮ ಮತ್ತು ಸಮಾಜ ಸೇವೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಕೆಲರಾಯ್ ನಿವಾಸಿ ಬೆಂಜಮಿನ್ ಡಿಸೋಜ (75) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಸುರತ್ಕಲ್ ಗೋವಿಂದಾಸ ಕಾಲೇಜಿನ ವಿಶ್ರಾಂತ ಸಹಾಯಕ ಪ್ರಾಧ್ಯಾಪಕಿ, ಪತ್ನಿ ವಾಯ್ಲೆಟ್ ಡಿಸೋಜ ಮತ್ತು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ನಗರದ ರೊಸಾರಿಯೊ ಹೈಸ್ಕೂಲ್, ಪುತ್ತೂರು ಮತ್ತು ಉಡುಪಿ ಕಲ್ಯಾಣಪುರದ ಶಾಲೆಗಳಲ್ಲಿ ಶಿಕ್ಷಕರಾಗಿ ದೀರ್ಘ ಕಾಲ ಕರ್ತವ್ಯ ನಿರ್ವಹಿಸಿದ್ದರು. ಶಿಕ್ಷಣ ಕ್ಷೇತ್ರದಿಂದ ಉದ್ಯಮ ರಂಗಕ್ಕೆ ಪ್ರವೇಶಿಸಿದ ಅವರು ವಿವಿಧ ಉದ್ಯಮಗಳಲ್ಲಿ ತೊಡಗಿಸಿ ಕೊಳ್ಳುವುದರ ಜೊತೆಗೆ ದ.ಕ. ಜಿಲ್ಲಾ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಅತ್ಯುತ್ತಮ ಸಮಾಜ ಸೇವಕ ಪುರಸ್ಕಾರವನ್ನು ಪಡೆದುಕೊಂಡಿದ್ದರು.

ಬಸ್ ಮಾಲಕರ ಸಂಘದ ಕಾರ್ಯದರ್ಶಿಯಾಗಿ, ಭೂ ನ್ಯಾಯ ಮಂಡಳಿಯ ಸದಸ್ಯರಾಗಿ, ಬಜ್ಪೆಪಂಚಾಯತ್‌ನ ಸದಸ್ಯರಾಗಿದ್ದರು. ಮಂಗಳೂರು ಧರ್ಮಪ್ರಾಂತದ ಪಾಲನ ಪರಿಷತ್ತಿನಲ್ಲಿ ಮೂರು ಅವಧಿಗೆ ಸದಸ್ಯರಾಗಿ, ಕಥೊಲಿಕ ಸಭಾ ಸಂಘಟನೆಯ ಪ್ರಥಮ ಅಜೀವ ಸದಸ್ಯರಾಗಿ, ಧರ್ಮಕ್ಷೇತ್ರದಲ್ಲಿ ಗುರಿಕಾರ, ಪಾಲನ ಪರಿಷತ್ ಉಪಾಧ್ಯಕ್ಷ, ಉತ್ತಮ ಕಾರ್ಯಕ್ರಮ ನಿರ್ವಾಹಕರಾಗಿ ಗಣನೀಯ ಸೇವೆ ಸಲ್ಲಿಸಿದ್ದ ಅವರು ಗಾಯನ ಮತ್ತು ಕ್ರೀಡಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News