×
Ad

ನೇಮಿರಾಜ ಹೆಗ್ಡೆ

Update: 2024-11-26 23:05 IST

ಮಾಡುಬಿದಿರೆ :ಶ್ರೀ ಮಹಾವೀರ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ. ನೇಮಿರಾಜ ಹೆಗ್ಡೆ (84) ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೂಲತಃ ಪಡಂಗಡಿಯವರಾದ ನೇಮಿರಾಜ ಹೆಗ್ಡೆ ಅವರು ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪಿಯು, ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಬಿಎಸ್ ಸಿ ಪದವಿ, ಮೈಸೂರಿನಲ್ಲಿ ಬಿ. ಪಿ.ಎಡ್. ಪದವಿ ಗಳಿಸಿದರು. 'ಮೂಡುಬಿದಿರೆ ಶ್ರೀಮಹಾವೀರ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ವೃತ್ತಿ ಜೀವನ ಪ್ರಾರಂಭಿಸಿ ಪೂರ್ಣ ಸೇವೆ ಸಲ್ಲಿಸಿ ಅಲ್ಲೇ ನಿವೃತ್ತಿ ಹೊಂದಿದರು.

ಕಾಲೇಜು ಜೀವನದಲ್ಲಿ ಎನ್ ಸಿ ಸಿ ಕೆಡೆಟ್ ಆಗಿ ರಾಷ್ಟ್ರಮಟ್ಟದ ಶಿಬಿರಗಳಲ್ಲಿ ಭಾಗವಹಿಸಿದ್ದರು. ಮಹಾವೀರ ಕಾಲೇಜಿನಲ್ಲಿ ವಿದ್ಯಾಥಿ೯ ಸ್ನೇಹಿಯಾಗಿದ್ದು ಅನೇಕ ಸಾಧಕ ಕ್ರೀಡಾಪಟುಗಳನ್ನು ರೂಪಿಸಿದ್ದರು.

ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಚೇತನಾ ಪ್ರಶಾಂತ್ ಸಹಿತ ಇಬ್ಬರು ಪುತ್ರಿಯರು ಹಾಗೂ ಅಪಾರ ವಿದ್ಯಾರ್ಥಿ ವೃಂದವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News