×
Ad

ಸಿಎ ರಾಮಚಂದ್ರ ಕಾಮತ್

Update: 2024-11-30 22:53 IST

ಮಂಗಳೂರು: ಹಿರಿಯ ಚಾರ್ಟೆರ್ಡ್ ಅಕೌಂಟೆಂಟ್ ಹಾಗೂ ಮಣ್ಣಗುಡ್ಡೆಯ ನಿವಾಸಿ ಸಿ.ಎ. ಮೂಲ್ಕಿ ರಾಮಚಂದ್ರ ಕಾಮತ್ (70) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ನಿಧನರಾದರು.

ಎಂ.ಆರ್. ಕಾಮತ್ ಎಂದೇ ಖ್ಯಾತರಾಗಿದ್ದ ಮೂಲ್ಕಿ ರಾಮಚಂದ್ರ ಕಾಮತ್ ಚಾರ್ಟರ್ಡ್ ಅಕೌಂಟೆಂಟ್ ವೃತ್ತಿಯಲ್ಲಿ 55 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದರು. ಐಸಿಎಐ ಮಂಗಳೂರು ಶಾಖೆಯ ಪದಾಧಿಕಾರಿಯಾಗಿ ಸಂಸ್ಥೆಯ ಬೆಳವಣಿಗೆಗೆ ಕೊಡುಗೆ ನೀಡಿದ್ದರು. ಅವಿವಾಹಿತರಾಗಿದ್ದ

ಕಾಮತ್ ಅವರು ಹಲವಾರು ದತ್ತಿ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಆಡಿಟರ್ ಆಗಿ ಯಾವುದೇ ಶುಲ್ಕವನ್ನು ಪಡೆಯದೆ ಉಚಿತವಾಗಿ ಸೇವೆ ನೀಡಿದ್ದರು. ಸಾಮಾಜಿಕವಾಗಿ ತನ್ನನ್ನು ತೊಡಗಿಸಿಕೊಂಡಿದ್ದ ಕಾಮತ್ ಅಸಂಖ್ಯಾತ ಮಹತ್ವಾಕಾಂಕ್ಷಿ ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News