×
Ad

ಅಜಿತ್ ಪೂಜಾರಿ ಪಾವೂರು

Update: 2024-12-25 20:09 IST

ಕೊಣಾಜೆ, ಡಿ.25: ಪಾವೂರು ಗ್ರಾಮದ ಭಂಡಾರ ಮನೆ ನಿವಾಸಿ, ದಿ. ರಾಮ ಪೂಜಾರಿಯ ಪುತ್ರ, ಪೈಂಟರ್ ವೃತ್ತಿಯ ಅಜಿತ್ ಪೂಜಾರಿ (42) ಮಂಗಳವಾರ ಹೃದಯಾಘಾತದಿಂದ ನಿಧನ ಹೊಂದಿದರು.

ಮಂಗಳೂರಿನ ಪಡೀಲ್‌ನ ಮನೆಯೊಂದರಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದಾಗ ಕುಸಿದು ಬಿದ್ದ ಇವರನ್ನು ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು.

ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಮೃತರು ಅಗಲಿದ್ದಾರೆ. ಪಾವೂರು ಹರೇಕಳದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News