×
Ad

ಕಮಲಾಕ್ಷ

Update: 2025-01-06 21:49 IST

ಮಂಗಳೂರು, ಜ.6: ನಗರದ ನಂತೂರು ನಿವಾಸಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಏಳನೇ ಪಡೆಯ ನಿವೃತ್ತ ಸ್ಪೆಷಲ್ ಎಆರ್‌ಎಸ್‌ಐ ಕೆ.ಕಮಲಾಕ್ಷ (60) ಅಲ್ಪಕಾಲದ ಅಸೌಖ್ಯದಿಂದ ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ರವಿವಾರ ನಿಧನರಾದರು.

ಮೃತರು ತಾಯಿ, ಪತ್ನಿ, ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

31 ವರ್ಷಗಳ ಕಾಲ ಕೆಎಸ್‌ಆರ್‌ಪಿ 7ನೇ ಬ್ಯಾಟಾಲಿಯನ್ ಅಸೈಗೋಳಿಯಲ್ಲಿ ಕರ್ತವ್ಯ ಸಲ್ಲಿಸಿದ್ದ ಅವರು ವಿಶೇಷ ಸಹಾಯಕ ಮೀಸಲು ಉಪನಿರೀಕ್ಷಕರಾಗಿ ನಿವೃತ್ತಿ ಹೊಂದಿದರು. ಅವರು ವಿಶಿಷ್ಟ ಸೇವೆಗಾಗಿ ಗಣರಾಜ್ಯೋತ್ಸವ 2018ರ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News