×
Ad

ಮಜೀದ್ ಮಾಸ್ಟರ್

Update: 2025-01-22 18:41 IST

ಕೊಣಾಜೆ: ಪಾವೂರು ಗ್ರಾಮದ ಮಲಾರ್ ನಿವಾಸಿ, ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಅಬ್ದುಲ್ ಮಜೀದ್ ಮಾಸ್ಟರ್(54) ಮಂಗಳವಾರ ತಡರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಲ್ಲೂರು, ಕುಕ್ಕಾಜೆ, ಮಲಾರ್ ಬದ್ರಿಯಾ ನಗರ ಶಾಲೆಯಲ್ಲಿ ಶಿಕ್ಷಕರಾಗಿದ್ದ ಇವರು ಪ್ರಸಕ್ತ ಪಾವೂರು ಗಾಡಿಗದ್ದೆ ಸರಕಾರಿ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸ್ಕೌಟ್ ಮೂಲಕ ವಿದ್ಯಾರ್ಥಿ ಗಳಲ್ಲಿ ಶಿಸ್ತಿನ ಪಾಠ ಕಲಿಸಿದ್ದರು. 2022ನೇ ಸಾಲಿನ ದ.ಕ.ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದ ಇವರು ಮಲಾರ್ ಜಂಕ್ಷನ್‌ನ ಖಾಲಿದ್ ಬಿನ್ ವಲೀದ್ ಮಸೀದಿಯ ಅಧ್ಯಕ್ಷರಾಗಿದ್ದರು.

ಒಂದೂವರೆ ವರ್ಷದ ಹಿಂದೆ ಅನಾರೋಗ್ಯಕ್ಕೀಡಾಗಿ ಬಳಿಕ ಚೇತರಿಸಿಕೊಂಡಿದ್ದರು. ಮಂಗಳವಾರ ತಡರಾತ್ರಿ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿದ್ದು, ತಕ್ಷಣ ಪಡೀಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News