ರಾಮಣ್ಣ ಗೌಡ
Update: 2025-02-04 22:17 IST
ಸುಳ್ಯ: ಕಲ್ಮಡ್ಕ ಗ್ರಾಮದ ಹಿರಿಯ ಕಲಾವಿದ ರಾಮಣ್ಣ ಗೌಡ ರಾಮತ್ತಿಕಾರು (74) ಅವರು ಫೆ.3ರಂದು ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು, ಒರ್ವ ಪುತ್ರಿಯನ್ನು ಅಗಲಿದ್ದಾರೆ.
ರಾಮಣ್ಣ ಅವರು ಕಳೆದ ಆರು ದಶಕಗಳಿಂದ ಕಲ್ಮಡ್ಕ ಸಂಗಮ ಕಲಾ ಸಂಘದ ಯಕ್ಷರಂಗ ಪ್ರಸಾದನದಲ್ಲಿ ಸೇವೆ ಸಲ್ಲಿಸಿ ಹೆಸರು ಗಳಿಸಿದ್ದರು. ಇವರನ್ನು ಹಲವೆಡೆ ಸಮ್ಮಾನಿಸಿ, ಗೌರವಿಸಲಾಗಿದೆ.