ಗೋಣಿಬೀಡು ಆತ್ಮಾರಾಮ್ ಶಾಸ್ತ್ರಿ
Update: 2025-02-14 21:56 IST
ಮಂಗಳೂರು: ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಜರ್ಸ್ ಲಿಮಿಟೆಡ್ (ಎಂಸಿಎಫ್) ನ ಮಾಜಿ ಹಿರಿಯ ಉಪಾಧ್ಯಕ್ಷ (ವರ್ಕ್ಸ್) ಜಿ.ವಿ. ಆತ್ಮಾರಾಮ್ ಶಾಸ್ತ್ರಿ (85) ಶುಕ್ರವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.
ಪತ್ನಿ ಮತ್ತು ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
1973ರಲ್ಲಿ ಸಹಾಯಕ ಇಂಜಿನಿಯರ್ ಆಗಿ ಎಂಸಿಎಫ್‌ಗೆ ಸೇರಿ ಸೇವಾ ಅವಧಿಯಲ್ಲಿ ಅನೇಕ ಹುದ್ದೆಗಳ ಮೂಲಕ ಜವಾಬ್ದಾರಿ ನಿಭಾಯಿಸಿ 1999ರಲ್ಲಿ ಹಿರಿಯ ಉಪಾಧ್ಯಕ್ಷ (ವರ್ಕ್ಸ್) ಸ್ಥಾನದಿಂದ ನಿವೃತ್ತರಾದರು.
ಆ ಬಳಿಕವೂ ಅವರು ಎಂಸಿಎಫ್ ಜೊತೆಗಿನ ತಮ್ಮ ಒಡನಾಟವನ್ನು ಮುಂದುವರೆಸಿದ್ದರು. ಆರಂಭದಲ್ಲಿ ತಾಂತ್ರಿಕ ಸಲಹೆಗಾರರಾಗಿ ಮತ್ತು ನಂತರ ಪೂರ್ಣಾವಧಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.