×
Ad

ನ್ಯಾಯವಾದಿ ಬಿ.ಕೃಷ್ಣ ಭಟ್

Update: 2025-02-22 18:51 IST

ಉಡುಪಿ, ಫೆ.22: ಹಿರಿಯ ನ್ಯಾಯವಾದಿ ಬಿ.ಕೃಷ್ಣ ಭಟ್ (84) ಅವರು ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ಹೊಂದಿದರು. ಅವರು ನ್ಯಾಯವಾದಿ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಬಿ.ಕೃಷ್ಣ ಭಟ್ ಅವರು 1962ರಿಂದ ಉಡುಪಿ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ವಕೀಲಿ ವೃತ್ತಿ ನಡೆಸುತಿದ್ದರು. ಅವರು ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತಿದ್ದರು.

ಶೃದ್ಧಾಂಜಲಿ ಸಭೆ: ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ನಿರ್ದೇಶಕರು, ಪ್ರಾಂಶುಪಾಲರು, ಪ್ರಾದ್ಯಾಪಕರು ಹಾಗೂ ವಿದ್ಯಾರ್ಥಿಗಳು ಆಡಳಿತ ಮಂಡಳಿಯ ಅಧ್ಯಕ್ಷ ಟಿ.ಅಶೋಕ್ ಪೈ ಅವರ ನೇತೃತ್ವದಲ್ಲಿ ಇಂದು ಸಭೆ ಸೇರಿ ನ್ಯಾಯವಾದಿ ಕೃಷ್ಣ ಭಟ್ ಅವರ ನಿಧನಕ್ಕೆ ಶೃದ್ದಾಂಜಲಿ ಅರ್ಪಿಸಿದರು. ಹಲವಾರು ದಶಕ ಗಳ ಕಾಲ ಸಂಸ್ಥೆಯ ಬೆಳವಣಿಗೆ ಮತ್ತು ಯಶಸ್ಸಿಗೆ ಅವರ ಕೊಡುಗೆಗಳನ್ನು ಸ್ಮರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News