ಕೆಎಂಡಿಸಿ ಮಾಜಿ ಅಧ್ಯಕ್ಷ ಮಸೂದ್ ಫೌಜ್ದಾರ್ ನಿಧನ
Update: 2025-03-03 21:58 IST
ಬೆಂಗಳೂರು : ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆಎಂಡಿಸಿ)ದ ಮಾಜಿ ಅಧ್ಯಕ್ಷ ಶಾ ಯೂಖೂಬ್ ಮುಹಮ್ಮದ್ ಮಸೂದ್ ಫೌಜ್ದಾರ್ ಮಾ.2ರಂದು ಬೆಳಗ್ಗೆ ಅನಾರೋಗ್ಯದಿಂದಾಗಿ ಚನ್ನಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.
ಮಾ.3ರಂದು ಸೋಮವಾರ ಮಧ್ಯಾಹ್ನ 3 ಗಂಟೆಗೆ ಹಾಷ್ಮಿ ಮಸೀದಿಯಲ್ಲಿ ನಮಾಝ್ ಎ ಜನಾಝ ನೆರವೇರಿಸಿದ ಬಳಿಕ ಚನ್ನಪಟ್ಟಣದ ಟಿ.ಕೆ.ರಸ್ತೆಯಲ್ಲಿರುವ ಚೋಟೋ ಖಬರಸ್ತಾನ್‍ನಲ್ಲಿ ದಫನ್ ಕಾರ್ಯವನ್ನು ನೆರವೇರಿಸಲಾಯಿತು.
ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ರಾಜ್ಯಸಭೆಯ ಮಾಜಿ ಉಪ ಸಭಾಪತಿ ಡಾ.ಕೆ.ರಹ್ಮಾನ್ ಖಾನ್, ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿ ಖಾನ್, ರಾಜ್ಯ ಹಜ್ ಸಮಿತಿ ಅಧ್ಯಕ್ಷ ಝುಲ್ಫಿಖಾರ್ ಅಹ್ಮದ್ ಟಿಪ್ಪು ಸೇರಿದಂತೆ ಇನ್ನಿತರರು ಮೃತರ ಅಂತಿಮ ದರ್ಶನ ಪಡೆದು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.