×
Ad

ಗಿರಿಜ ಕೋಂಗುಜೆ

Update: 2025-03-09 20:14 IST

ಉಪ್ಪಿನಂಗಡಿ: ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‍ನ ನಿಕಟಪೂರ್ವಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಅವರ ತಾಯಿ, ನಿವೃತ್ತ ಶಿಕ್ಷಕ ಕಕ್ಕೆಪದವು ಬಾಬು ಪೂಜಾರಿಯವರ ಪತ್ನಿ  ಗಿರಿಜ ಕೋಂಗುಜೆ (77) ಕೆಲ ದಿನಗಳ ಅನಾರೋಗ್ಯದಿಂದ ಮಾ. 9ರಂದು ರಾಮನಗರದ ಮನೆಯಲ್ಲಿ ನಿಧನ ಹೊಂದಿದರು.

ಗಿರಿಜರವರ ಪತಿ ಬಾಬು ಪೂಜಾರಿಯವರು ಇತ್ತೀಚೆಗೆ ನಿಧನ ಹೊಂದಿದ್ದು, ಆ ಬಳಿಕ ಅವರು ಮಾನಸಿಕ ವಾಗಿ ಕುಗ್ಗಿ ಹೋಗಿದ್ದರು. ಉಪ್ಪಿನಂಗಡಿಯಲ್ಲಿ ಡಾ. ರಾಜಾರಾಮ್ ಮನೆಯಲ್ಲಿ ಇದ್ದ ಇವರು 2 ಬಾರಿ ಹೃದಯನೋವಿಗೆ ಒಳಗಾಗಿ ಚೇತರಿಸಿಕೊಂಡಿದ್ದರು. ಮೃತರು ಪುತ್ರರಾದ ಡಾ. ರಾಜಾರಾಮ್, ಜಯರಾಮ, ಪುತ್ರಿಯರಾದ ಸುಜಯ, ವಿಜಯರನ್ನು ಅಗಲಿದ್ದಾರೆ. ಡಾ. ರಾಜಾರಾಮ್ ಕೆ.ಬಿ. ಅವರ ರಾಮನಗರದ ಮನೆಯಲ್ಲಿ ಮಧ್ಯಾಹ್ನ ತನಕ ಮೃತದೇಹದ ಅಂತಿಮ ದರ್ಶನ ನಡೆದು, ಬಳಿಕ ಕಕ್ಯಪದವಿನ ಕೋಂಗುಜೆಯಲ್ಲಿ ಮೃತದೇಹದ ಅಂತಿಮ ಸಂಸ್ಕಾರ ನಡೆಯಿತು.

ಮೃತರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಪ್ರಭಾಕರ ಬಂಗೇರ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಪುತ್ತೂರು ಕೋಟಿ- ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಬಿಲ್ಲವ ಸಂಘದ ಮುಖಂಡರಾದ ಜಯವಿಕ್ರಂ ಕಲ್ಲಾಪು, ಚಿದಾನಂದ ಪೂಜಾರಿ ಎಲ್ದಡ್ಕ, ಕಾಂಗ್ರೆಸ್ ಪಕ್ಷದ ಮುಖಂಡಾರಾದ ಹರೀಶ್ ಕುಮಾರ್, ಎಂ.ಬಿ. ವಿಶ್ವನಾಥ ರೈ, ರಕ್ಷಿತ್ ಶಿವರಾಂ, ಹೇಮನಾಥ ಶೆಟ್ಟಿ ಕಾವು, ಮುರಳೀಧರ ರೈ ಮಠಂತಬೆಟ್ಟು, ಎಂ.ಎಸ್. ಮುಹಮ್ಮದ್, ಉಮಾನಾಥ ಶೆಟ್ಟಿ ಪೆರ್ನೆ, ಅಶ್ರಫ್ ಬಸ್ತಿಕ್ಕಾರ್, ಜಯಪ್ರಕಾಶ್ ಬದಿನಾರು, ಅನಿ ಮಿನೇಜಸ್, ಅಬ್ದುರ್ರಹ್ಮಾನ್ ಯುನಿಕ್, ಮಲ್ಲಿಕಾ, ವೆಂಕಪ್ಪ ಪೂಜಾರಿ ಮರುವೇಲು, ಪ್ರಮುಖರಾದ ಮೋನಪ್ಪ ಬಂಗೇರ, ಮೋನಪ್ಪ ಕಂಡೆತ್ಯಿಯಾರ್, ಉಪ್ಪಿನಂಗಡಿಯ ವೈದ್ಯರಾದ ಡಾ. ಕೆ.ಜಿ. ಭಟ್, ಡಾ. ನಿರಂಜನ ರೈ, ಡಾ. ರಘು ಮತ್ತಿತರರು ಭೇಟಿ ನೀಡಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News