×
Ad

ಡಾ. ಸಮೀಉರ್ ರಹ್ಮಾನ್

Update: 2025-03-13 20:40 IST

ಮಂಗಳೂರು, ಮಾ.13: ನಗರದ ಹಿರಿಯ ವೈದ್ಯ, ಮೂಲತಃ ಕುದ್ರೋಳಿ ನಿವಾಸಿ ಡಾ. ಸಮೀ ಉರ್ ರಹ್ಮಾನ್ (75) ಗುರುವಾರ ಅಪರಾಹ್ನ ಫಳ್ನೀರ್ ಎಸ್.ಎಲ್. ಮಥಾಯಸ್ ರಸ್ತೆಯಲ್ಲಿರುವ ಅಪಾರ್ಟ್‌ ಮೆಂಟ್‌ವೊಂದರಲ್ಲಿ ನಿಧನರಾದರು.

ಪತ್ನಿ, ನಾಲ್ಕು ಮಂದಿ ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.

ಕುದ್ರೋಳಿ, ಬಂದರ್ ಪರಿಸರದಲ್ಲಿ ವೈದ್ಯರಾಗಿದ್ದ ಅವರು ಕೆಎಂಸಿ ಆಸ್ಪತ್ರೆಯಲ್ಲೂ ಹಲವು ವರ್ಷಗಳ ಕಾಲ ವೈದ್ಯರಾಗಿ ಕಾರ್ಯನಿರ್ವಹಿಸಿದ್ದರು.

ಅಂತ್ಯಕ್ರಿಯೆಯು ಶುಕ್ರವಾರ ಜುಮಾ ನಮಾಝ್ ಬಳಿಕ ಕುದ್ರೋಳಿ ಜಾಮಿಯಾ ಮಸೀದಿಯ ಆವರಣದಲ್ಲಿರುವ ದಫನ ಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News