ಚಂದ್ರಶೇಖರ್
Update: 2025-04-19 22:52 IST
ಉಪ್ಪಿನಂಗಡಿ: ಇಲ್ಲಿನ ಹಿರಿಯ ಆರೆಸ್ಸೆಸ್ ಸ್ವಯಂಸೇವಕ, ಜವುಳಿ ಉದ್ಯಮಿ ಯು. ಚಂದ್ರಶೇಖರ್ (77) ಹೃದಯಾಘಾತದಿಂದಾಗಿ ಶನಿವಾರ ನಸುಕಿನ ವೇಳೆ ನಿಧನರಾದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ಆಡಳಿತ ಮಂಡಳಿಯ ಮಾಜಿ ಸದಸ್ಯರೂ, ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ಮಾಜಿ ಅಧ್ಯಕ್ಷರೂ , ಪುತ್ತೂರು ತಾಲೂಕು ಗಾಣಿಗರ ಯಾ ಸಫಲಿಗರ ಸಂಘದ ಮಾಜಿ ಅಧ್ಯಕ್ಷರೂ ಆಗಿದ್ದ ಇವರು, ಪತ್ನಿ, ಒರ್ವ ಪುತ್ರ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.