ಜಿ.ಎಂ ಹನೀಫ್ ಅಡ್ಕಾರ್
Update: 2025-04-20 21:49 IST
ಜಾಲ್ಸೂರು: ಗ್ರಾಮದ ಅಡ್ಕಾರ್ ನಿವಾಸಿ ಉದ್ಯಮಿ ಜಿ.ಎಂ ಹನೀಫ್ (57) ಅಲ್ಪಕಾಲದ ಅಸೌಖ್ಯದಿಂದ ರವಿವಾರ ನಿಧನರಾದರು.
ಮೃತರು ಸುಳ್ಯದಲ್ಲಿ ಹಲವಾರು ವರ್ಷಗಳ ಕಾಲ ಅಲ್ಯೂಮಿನಿಯಂ ಪ್ಯಾಬ್ರಿಕೇಶನ್ ಉದ್ಯಮ ನಡೆಸುತ್ತಿ ದ್ದರು. ಮೃತರಿಗೆ ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿ, ಇಬ್ಬರು ಸಹೋದರರು ಇದ್ದಾರೆ.