×
Ad

ಎಡಕ್ಕಾನ ರಾಜಾರಾಮ ಭಟ್

Update: 2025-05-06 22:19 IST

ಸುಳ್ಯ| ಉದ್ಯಮಿ ಹಾಗೂ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಅರುಣ್ ಕುಮಾರ್ ಪುತ್ತಿಲ ಪರಿವಾರದಲ್ಲಿ ಪ್ರಧಾನವಾಗಿ ಗುರುತಿಸಿಕೊಂಡಿದ್ದ ಎಡಕ್ಕಾನ ರಾಜಾರಾಮ ಭಟ್ (56) ಮಂಗಳವಾರ ಮುಂಜಾನೆ ದುಬೈಯಲ್ಲಿ ಹೃದಯಾಘಾತದಿಂದ ನಿಧನರಾದರು.

ಸುಳ್ಯದ ಕಲ್ಮಡ್ಕ ಗ್ರಾಮದ ಶೆಟ್ಟಿಗದ್ದೆ ಎಂಬಲ್ಲಿಯ ನಿವಾಸಿಯಾದ ರಾಜಾರಾಮ ಭಟ್‍ರು ಎಡಕ್ಕಾನ ಟ್ರೇಡರ್ಸ್ ಎಂಬ ವ್ಯಾಪಾರ ಮಳಿಗೆಯನ್ನು ಹೊಂದಿದ್ದರಲ್ಲದೆ, ದುಬೈ, ಮಸ್ಕತ್ ಗಳಲ್ಲಿ ಖರ್ಜೂರದ ವ್ಯಾಪಾರ ಕೂಡ ಹೊಂದಿದ್ದರು. ವ್ಯವಹಾರದ ನಿಮಿತ್ತ ಕೆಲದಿನಗಳ ಹಿಂದೆ ದುಬೈಗೆ ಹೋಗಿದ್ದ ಅವರು ಅಲ್ಲಿ ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದರು.

ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭ ಅರುಣ್ ಕುಮಾರ್ ಪುತ್ತಿಲ ಬಿ.ಜೆ.ಪಿ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವಲ್ಲಿ ಎಡಕ್ಕಾನ ರಾಜಾರಾಮರು ಪ್ರಧಾನ ಪಾತ್ರ ವಹಿಸಿ, ಪುತ್ತಿಲ ಪರಿವಾರದ ಮುಂಚೂಣಿ ನಾಯಕರಾಗಿದ್ದರು. ಚುನಾವಣೆ ಕಳೆದು ಒಂದು ವರ್ಷದ ಬಳಿಕ ಪುತ್ತಿಲರೊಂದಿಗೆ ಭಿನ್ನಾಭಿ ಪ್ರಾಯ ಬಂದು ಅವರು ಪುತ್ತಿಲ ಪರಿವಾರ ತೊರೆದಿದ್ದರಲ್ಲದೆ, ಪುತ್ತಿಲರ ವಿರುದ್ಧ ಕೇಸು ಆಗುವುದರಲ್ಲೂ ಪಾತ್ರ ವಹಿಸಿದ್ದರು. ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News