ಸಯ್ಯದ್ ಮೊಹಮ್ಮದ್ ಹಾರಿಸ್
Update: 2025-05-23 23:34 IST
ಕುಂದಾಪುರ: ಇಲ್ಲಿನ ಮಸೀದಿ ರಸ್ತೆ ನಿವಾಸಿ, ದಿವಂಗತ ಸಯ್ಯದ್ ಅಬೂಬಕ್ಕರ್ ಮಾಸ್ಟರ್ ಅವರ ಪುತ್ರ ಸಯ್ಯದ್ ಮೊಹಮ್ಮದ್ ಹಾರಿಸ್(76) ಹೃದಯಾಘಾತದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ. ಹಾರಿಸ್ ಅವರು ಹಲವು ದಶಕಗಳಿಂದ ದುಬಾಯಿಯಲ್ಲಿ ಉದ್ಯಮ ನಡೆಸುತ್ತಿದ್ದರು.