ಸಾರಿಗೆ ಉದ್ಯಮಿ ಬಿ.ವೆಂಕಟಗಿರಿ ಭಟ್ ನಿಧನ
Update: 2023-07-29 19:03 IST
ಉಡುಪಿ, ಜು.29: ನಗರದ ಹಿರಿಯ ಸಾರಿಗೆ ಉದ್ಯಮಿ ಬೈಲೂರು ವೆಂಕಟಗಿರಿ ಭಟ್ (81) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಕಲಾಪೋಷಕರಾದ ಇವರು, ನಗರದ ಭಾರತಿ ಡ್ರೈವಿಂಗ್ ಸ್ಕೂಲ್ ಮತ್ತು ಭಾರತಿ ಮೋಟಾರ್ಸ್‌ನ ಮಾಲಕರಾಗಿದ್ದರು. ಯಕ್ಷಗಾನ ಕಲಾರಂಗದ ಸದಸ್ಯರಾಗಿದ್ದ ಇವರ ನಿಧನಕ್ಕೆ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.