ವಿಶ್ವಾಂಭರ ಭಂಡಾರಿ
Update: 2026-01-19 18:45 IST
ಗುರುಪುರ, ಜ.19: ಪೊಳಲಿ ಸಮೀಪದ ಕಲ್ಲಗುಡ್ಡೆ ವರಕೋಡಿ ನಿವಾಸಿ, ಅಡ್ಡೂರಿನ ಸಹರಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ರಕ್ಷಕ ಶಿಕ್ಷಕ ಸಂಘದ (ಪಿಟಿಎ) ಅಧ್ಯಕ್ಷ ಹಾಗೂ ಧಾರ್ಮಿಕ ಮುಂದಾಳು ವಿಶ್ವಾಂಭರ ಭಂಡಾರಿ (46) ಸೋಮವಾರ ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.
ಮೃತರು ಪತ್ನಿ, ಒಬ್ಬ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
*ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಯು.ಪಿ. ಇಬ್ರಾಹಿಂ, ಪದಾಧಿಕಾರಿಗಳು, ಶಿಕ್ಷಕ ವೃಂದವು ಸಂತಾಪ ಸೂಚಿಸಿದೆ.