×
Ad

ಧಾರವಾಡ : ಬೆಂಕಿ ತಗಲಿ ಮಗು ಮೃತ್ಯು

Update: 2025-08-17 22:28 IST

ಧಾರವಾಡ, ಆ.17 : ಥಿನ್ನರ್ ಬಾಟಲಿ ಕೈ ಜಾರಿ ಬಿದ್ದು ಬೆಂಕಿ ತಗಲಿ ತೀವ್ರವಾಗಿ ಗಾಯಗೊಂಡಿದ್ದ ಮಗು ಮೃತಪಟ್ಟಿರುವ ಘಟನೆ ಸಂತೋಷ್ ನಗರದಲ್ಲಿ ನಡೆದಿರುವುದು ವರದಿಯಾಗಿದೆ.

ಅಗಸ್ತ್ಯ(4) ಮೃತಪಟ್ಟ ಮಗು. ಚಂದ್ರಕಾಂತ ಮಾಶ್ಯಾಳ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಅಗಸ್ತ್ಯ ಆಟವಾಡುತ್ತಿದ್ದ ವೇಳೆ ಥಿನ್ನರ್ ಜಾರಿ ಬಿದ್ದಿದೆ. ಅಲ್ಲಿಯೇ ಇದ್ದ ಬೆಂಕಿಗೆ ಥಿನ್ನರ್ ತಗಲಿ ಮಗುವಿಗೆ ಬೆಂಕಿ ಹೊತ್ತಿಕೊಂಡಿದೆ. ರಕ್ಷಣೆಗೆ ಹೋದ ತಂದೆ ಚಂದ್ರಕಾಂತ್‌ಗೂ ಬೆಂಕಿ ತಗಲಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

ಧಾರವಾಡ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News