×
Ad

Hubballi | ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆ

Update: 2026-01-27 13:10 IST

ಹುಬ್ಬಳ್ಳಿ : ಹುಬ್ಬಳ್ಳಿಯ ವಿಮಾನ ನಿಲ್ದಾಣದ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯೊಂದು ಕೊನೆಗೂ ಹುಬ್ಬಳ್ಳಿ ವಿಮಾನ ನಿಲ್ದಾಣದ ಆವರಣದಲ್ಲಿ ಇಡಲಾಗಿದ್ದ ಬೋನಿಗೆ ಬಿದ್ದಿದೆ.

ಕಳೆದ ತಿಂಗಳು ನಗರದ ವಿಮಾನ ನಿಲ್ದಾಣ, ಕಾರವಾರ ರಸ್ತೆ ಹಾಗೂ ಸುತಗಟ್ಟಿ, ಗಾಮನಗಟ್ಟಿ, ಸತ್ತೂರಿನ‌ ಸುತ್ತ ಮುತ್ತ ಈ ಚಿರತೆ ಓಡಾಟ ನಡೆಸಿದ್ದು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಹುಬ್ಬಳ್ಳಿ ನಗರದ ಜನತೆಯಲ್ಲಿ ಆತಂಕ ಮೂಡಿಸಿದ್ದ ಚಿರತೆ ಸರೆಗೆ ಮೈಸೂರು, ಗದಗ, ಬೆಳಗಾವಿಯಿಂದ ಅರಣ್ಯ ಇಲಾಖೆಯ ವಿಶೇಷ ತಂಡ ಕಾರ್ಯಾಚರಣೆ ನಡೆಸಿದ್ದರೂ ಈ ಚಿರತೆ ಸೆರೆಯಾಗಿರಲಿಲ್ಲ.‌

ಈ ಕಾರ್ಯಾಚರಣೆಯಲ್ಲಿ ಹುಬ್ಬಳ್ಳಿಯ ವಿಮಾನ ನಿಲ್ದಾಣದ ಆವರಣದಲ್ಲಿ 3 ಸಾಮಾನ್ಯ ಹಾಗೂ ವಿಶೇಷ ಬೋನನ್ನು (ಕೇಜ್)‌‌ ಇರಿಸಲಾಗಿತ್ತು. ಅದರಂತೆ ಸತ್ತೂರಿನಲ್ಲಿ ಒಂದು ಬೋನ್ ಇಡಲಾಗಿತ್ತು. ಚಿರತೆಯ ಚಲನವಲನ ಕಂಡುಹಿಡಿಯಲು 25 ಕ್ಕೂ ಹೆಚ್ಚು ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ರವಿವಾರ ವಿಮಾನ ನಿಲ್ದಾಣದಲ್ಲಿ ಬೋನಿನಲ್ಲಿ ಪ್ರಾಣಿಯೊಂದನ್ನು ಹಾಕಿ ಸೆರೆಹಿಡಿಯಲು ನಿರತರಾಗಿದ್ದು ಸೋಮವಾರ ರಾತ್ರಿ ಆ ಪ್ರಾಣಿಯನ್ನು ತಿನ್ನಲು ಬಂದ ಚಿರತೆ ಬೋನಿಗೆ ಬಿದ್ದಿದೆ ಎನ್ನಲಾಗಿದೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಬೋನಿನಲ್ಲಿ ಬಂಧಿಯಾದ ಚಿರತೆಯನ್ನು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ್ದು, ನಿಯಮಾನುಸಾರ ಅನುಮತ ಪಡೆದು ಇಂದು ಚಿರತೆಯನ್ನು ಕಾಡಿಗೆ ಬಿಡುವ ಪ್ರಕ್ರಿಯೆ ನಡೆಸಲಾಗುವುದು ಎಂದು ಹುಬ್ಬಳ್ಳಿ ವಲಯ ಅರಣ್ಯ ಅಧಿಕಾರಿ ಆರ್.ಎಸ್ ಉಪ್ಪಾರ ಮಾಹಿತಿ ನೀಡಿದ್ದಾರೆ..

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News