×
Ad

ಹುಬ್ಬಳ್ಳಿ: ಹಿರಿಯ ರಂಗಭೂಮಿ ಕಲಾವಿದೆ ಶಾಂತಾಬಾಯಿ ಜೋಶಿ ನಿಧನ

Update: 2025-10-20 11:22 IST

ಹುಬ್ಬಳ್ಳಿ: ಕನ್ನಡದ ಹಿರಿಯ ರಂಗಭೂಮಿ ಕಲಾವಿದೆ ಶಾಂತಾಬಾಯಿ ಜೋಶಿ (89) ಹುಬ್ಬಳ್ಳಿಯಲ್ಲಿ ಸೋಮವಾರ ನಿಧನರಾದರು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಗರದ ಸುಶ್ರುತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

1936 ನ.1 ರಂದು ಜನಿಸಿದ ಇವರು ವೃತ್ತಿ ರಂಗಭೂಮಿಯಲ್ಲಿ ಸುಮಾರು ಎಪ್ಪತ್ತು ವರ್ಷಗಳಷ್ಟು ಸುದೀರ್ಘ ಸೇವೆ ಸಲ್ಲಿಸಿದ್ದರು. ತಮ್ಮದೇ ಆದ ವಿಶಿಷ್ಟ ಅಭಿನಯಕ್ಕೆ ಹೆಸರಾಗಿದ್ದ ಶಾಂತಾಬಾಯಿ ಜೋಶಿ ಅವರಿಗೆ ಕಳೆದ ವರ್ಷ ನವೆಂಬರ್ 1 ರಂದು ಕರ್ನಾಟಕ ರಾಜ್ಯ ಸರ್ಕಾರವು ಸ್ವರ್ಣ ಕಮಲ ಪ್ರಶಸ್ತಿ ಘೋಷಿಸಿತ್ತು .

ಮೃತರು ಪುತ್ರರಾದ ನಂದಕುಮಾರ್ ಜೋಶಿ ಹಾಗೂ ಹಿರಿಯ ಸುದ್ದಿ ಛಾಯಾಗ್ರಾಹಕ ಎಂ ಎಂ ಜೋಶಿ ಅವರನ್ನು ಅಗಲಿದ್ದಾರೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News