×
Ad

ಪತ್ರಕರ್ತ ವೆಂಕಟೇಶ ಸಂಪ ಅವರಿಗೆ ʼಬೇಂದ್ರೆ ನುಡಿ ಸಿರಿʼ ಪ್ರಶಸ್ತಿ

Update: 2024-07-24 23:36 IST

ವೆಂಕಟೇಶ ಎಸ್.ಸಂಪ 

ಧಾರವಾಡ : ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಚೇತನ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ನೀಡುವ "ಬೇಂದ್ರೆ ನುಡಿ ಸಿರಿ" ಪ್ರಶಸ್ತಿಗೆ ಪತ್ರಕರ್ತ, ಸಂಪದ ಸಾಲು ಪತ್ರಿಕೆಯ ಸಂಪಾದಕ ವೆಂಕಟೇಶ ಎಸ್.ಸಂಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಚೇತನ ಫೌಂಡೇಶನ್ ಅಧ್ಯಕ್ಷರಾದ ಚಂದ್ರಶೇಖರ್ ಮಾಡಲಗೇರಿ ತಿಳಿಸಿದ್ದಾರೆ.

ಕನಕ ಭವನ, ಕರ್ನಾಟಕ ವಿಶ್ವ ವಿದ್ಯಾನಿಲಯ ದಾರವಾಡದಲ್ಲಿ ಜು.28ರಂದು ನಡೆಯುವ ಮೂರು ದಿನಗಳ ʼದಾರವಾಡ ನುಡಿ ಸಡಗರʼ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುವುದು. ವೆಂಕಟೇಶ ಸಂಪ ಅವರ ಮಾಧ್ಯಮ ಕ್ಷೇತ್ರದ ಸೇವೆಯನ್ನು ಗಮನಿಸಿ ʼಬೇಂದ್ರೆ ನುಡಿ ಸಿರಿ ಪ್ರಶಸ್ತಿʼ ನೀಡಿ ಗೌರವಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಪತ್ರಕರ್ತ ವೆಂಕಟೇಶ ಸಂಪ ಅವರು ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಸಂಪದ ಸಾಲು ಪತ್ರಿಕೆಯನ್ನು ಕಳೆದ 17 ವರ್ಷಗಳಿಂದ ನೆಡೆಸುತ್ತಿದ್ದಾರೆ. ಇವರ ಕತೆ, ಕವನ, ಲೇಖನಗಳು ರಾಜ್ಯದ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಟಿವಿ, ಧಾರಾವಾಹಿ, ರೇಡಿಯೋಗಳಲ್ಲಿ ಇವರ ಕಾರ್ಯಕ್ರಮಗಳು ಪ್ರಸಾರವಾಗಿದೆ. ಸಾವಯವ ಕೃಷಿಯಲ್ಲೂ ತೊಡಗಿರುವ ವೆಂಕಟೇಶ ಸಂಪ ಅವರು, ವಿದ್ಯಾರ್ಥಿಗಳಿಗಾಗಿ ಕಲಿಕೆಯ ಜೊತೆ ಗಳಿಕೆ, ರೈತರಿಗಾಗಿ ಪರಿಸರ ಜಾಗೃತಿ ಮುಂತಾದ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News