×
Ad

ʼಗ್ಯಾರಂಟಿʼ ಹೆಸರಲ್ಲಿ ಜನರನ್ನು ಮರುಳು ಮಾಡುವ ಸರ್ಕಾರ ನಮ್ಮದಲ್ಲ : ಪ್ರಹ್ಲಾದ್ ಜೋಶಿ

Update: 2024-05-04 22:41 IST

ಹುಬ್ಬಳ್ಳಿ : ʼಗ್ಯಾರೆಂಟಿʼ, ಉಚಿತ ಕೊಡುಗೆ ಎನ್ನುತ್ತಾ ಜನರಿಗೆ ಮೋಸ ಮಾಡುವ ಸರ್ಕಾರ ನಮ್ಮದಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ವರೂರಿನ ವಿಆರ್ ಎಲ್ ಸಂಸ್ಥೆ ಆವರಣದಲ್ಲಿ ಇಂದು ಕೈಗೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ಉಚಿತ ಕೊಡುಗೆಗಳ ನೆಪದಲ್ಲಿ ಜನರನ್ನು ಸೆಳೆದು, ನಂಬಿಸಿ ಮೋಸ ಮಾಡುವ ಸರ್ಕಾರ ನಮ್ಮದಲ್ಲ. ಆಥಿರ್ಕತೆ ಜತೆಗೆ ಮಾನವ ಸಂಪನ್ಮೂಲವೂ ಅಭಿವೃದ್ಧಿಯಾಗಬೇಕು ಎಂಬ ಧ್ಯೇಯ ಬಿಜೆಪಿಯದ್ದು ಎಂದು ಪ್ರತಿಪಾದಿಸಿದರು.

ಕಲ್ಲಿದ್ದಲು, 2ಜಿ ಭ್ರಷ್ಟಾಚಾರ ಹಗರಣಗಳಿಂದಾಗಿ ಯುಪಿಎ ಕಾಲದಲ್ಲಿ ಕಳೆದು ಹೋಗಿದ್ದ ದೇಶದ ಗೌರವವನ್ನು ಪ್ರಧಾನಿ ಮೋದಿ ಕಾಪಾಡಿದ್ದಾರೆ. ಮೋದಿ 10 ವರ್ಷದಲ್ಲಿ ಮಹತ್ವದ ಬದಲಾವಣೆ ತಂದಿದ್ದಾರೆ. ಜಗತ್ತಿನಲ್ಲೇ ದೇಶದ ಗೌರವ ಎತ್ತಿ ಹಿಡಿದಿದ್ದಾರೆ ಎಂದರು.

ಮಹಿಳೆಯರು ಸಶಕ್ತ: ಉಜ್ವಲ ಯೋಜನೆ, ಮನೆ ಮನೆಗೆ ನೀರು ಕೊಡುವ ಯೋಜನೆ ರೂಪಿಸಿದ್ದಾರೆ. ಧಾರವಾಡ ಜಿಲ್ಲೆಯ ಪ್ರತಿ ಹಳ್ಳಿಗೆ ಪೈಪ್​ಲೈನ್​ ಮೂಲಕ ನೀರು ಪೂರೈಸಲು ಸುಮಾರು 1400 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಒಂದು ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದರು.

ಸಭೆಯಲ್ಲಿ ಡಾ.ವಿಜಯ ಸಂಕೇಶ್ವರ, ಎಪಿಎಂಸಿ ಮಾಜಿ ಸದಸ್ಯ ಚನ್ನು ಹೊಸಮನಿ, ವಿಆರ್​ಎಲ್​ ಸಂಸ್ಥೆಯ ಅಧಿಕಾರಿ ವರ್ಗದವರು, ಸಿಬ್ಬಂದಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News