×
Ad

ಕಾಂಗ್ರೆಸ್ ಪಕ್ಷ ಮೊದಲು ಝಮೀರ್ ಅಹ್ಮದ್‌ರನ್ನು ಕಿತ್ತೊಗೆಯಲಿ : ಪ್ರಹ್ಲಾದ್‌ ಜೋಶಿ

Update: 2024-10-30 12:27 IST

ಝಮೀರ್‌ ಅಹ್ಮದ್/ಪ್ರಹ್ಲಾದ್‌ ಜೋಶಿ

ಹುಬ್ಬಳ್ಳಿ : ʼಕಾಂಗ್ರೆಸ್ ಪಕ್ಷ ಮೊದಲು ಝಮೀರ್ ಅಹ್ಮದ್ ಅವರನ್ನು ಕಿತ್ತೊಗೆಯಲಿʼ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು, "ವಕ್ಫ್ ಭೂ ಕಬಳಿಕೆಯಲ್ಲಿ ಝಮೀರ್ ಅಹ್ಮದ್ ಸಂಚಿದೆ. ಕಾಂಗ್ರೆಸ್ ಪಕ್ಷಕ್ಕೆ ಮಾನ ಮರ್ಯಾದೆ, ಇದ್ದರೆ ತಕ್ಷಣ ಅವರನ್ನು ಪಕ್ಷದಿಂದಲೇ ಕಿತ್ತೊಗೆಯಲಿ" ಎಂದು ಆಗ್ರಹಿಸಿದರು.

ಸಚಿವ ಝಮೀರ್ ಅಹ್ಮದ್ ಎಲ್ಲೆಡೆ ಕೋಮು-ದ್ವೇಷ ಹರಡುತ್ತಿದ್ದಾರೆ. ಮತಾಂಧತೆಯಲ್ಲಿ ತೇಲಾಡುತ್ತಿರುವ ಝಮೀರ್ ಅಹ್ಮದ್ ರನ್ನು ಕಾಂಗ್ರೆಸ್ ಪಕ್ಷ ಹೊರಹಾಕಲಿ ಎಂದು ಹೇಳಿದರು.

ದೇವಸ್ಥಾನಗಳ ಒಂದಿಂಚೂ ಜಾಗ ಜಾಸ್ತಿಯಾಗಿಲ್ಲ :

ಕಾಂಗ್ರೆಸ್ಸಿನ ಡೋಂಗಿ ಜಾತ್ಯಾತೀತತೆ ಮತ್ತು ಮುಸ್ಲಿಂ ತುಷ್ಟೀಕರಣದಿಂದಾಗಿ ಮುಜರಾಯಿ ದೇವಸ್ಥಾನಗಳ ಒಂದೇ ಒಂದು ಇಂಚು ಜಾಗವೂ ಜಾಸ್ತಿಯಾಗಿಲ್ಲ. ಬದಲಿಗೆ ಎಲ್ಲಾ ವಕ್ಫ್ ಬೋರ್ಡ್‌ನದ್ದೇ ಆಗುತ್ತಿದೆ. ಅನೇಕ ದೊಡ್ಡ ದೊಡ್ಡ ದೇವಸ್ಥಾನಗಳ ಆಡಳಿತ-ನಿಯಂತ್ರಣ ರಾಜ್ಯ ಸರಕಾರದ, ಮುಜರಾಯಿ ಇಲಾಖೆ ಬಳಿ ಇದೆ. ಈ ದೇಗುಲಗಳ ಆಸ್ತಿಯೇ ಒಂದಿಂಚೂ ಹೆಚ್ಚಿಲ್ಲ. ಹೀಗಿರುವಾಗ ವಕ್ಫ್‌ಗೆ ಹೇಗೆ ಆಸ್ತಿ ಹೋಗುತ್ತದೆ? ಅದರ ಆಸ್ತಿ ಹೇಗೆ ಹೆಚ್ಚುತ್ತದೆ? ಎಂದು ಪ್ರಹ್ಲಾದ್ ಜೋಶಿ ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News