×
Ad

ಪ್ರಹ್ಲಾದ್‌ ಜೋಶಿ ಬೆಂಬಲವಾಗಿ ಬಿಎಸ್‌ವೈ ನಿಂತಿರುವುದು ನೋಡಿದರೆ ಕನಿಕರ ಉಂಟಾಗುತ್ತದೆ : ದಿಂಗಾಲೇಶ್ವರ ಸ್ವಾಮೀಜಿ

Update: 2024-04-17 19:21 IST

ಹುಬ್ಬಳ್ಳಿ : ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್‌ ಜೋಶಿ ಪರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಬಲವಾಗಿ ನಿಂತಿರುವುದು ನೋಡಿದರೆ ಕನಿಕರ ಉಂಟಾಗುತ್ತದೆ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದ್ದಾರೆ

ಬುಧವಾರ ಹುಬ್ಬಳ್ಳಿಯ ಶಾಂತಿನಗರದಲ್ಲಿನ ಸೂಫಿ ಸಂತರ ಸಂಘದ ರಾಜ್ಯಾಧ್ಯಕ್ಷರ ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೋಷಿ ಅವರಿಂದ ಬಿ.ಎಸ್.ಯಡಿಯೂರಪ್ಪ ತೊಂದರೆಗೆ ಒಳಗಾಗಿ, ಅಧಿಕಾರ ಬಿಡುವಂತಾಯಿತು. ಈಗ ಅವರೇ ಜೋಶಿಗೆ ಬೆಂಬಲವಾಗಿ ನಿಂತು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದನ್ನು ಕಂಡರೆ ತಮಗೆ ಬಿಎಸ್‍ವೈ ಮೇಲೆ ಕನಿಕರ ಉಂಟಾಗುತ್ತದೆ ಎಂದು ನುಡಿದರು.

ಬಿಜೆಪಿ ಅಭ್ಯರ್ಥಿಗೆ ಸೋಲಿನ ಹತಾಶೆ, ಭೀತಿ ಉಂಟಾಗಿದೆ. ಹೀಗಾಗಿ ರಾಜ್ಯಸಭೆ ಸದಸ್ಯರು, ಮಾಜಿ ಸಿಎಂಗಳು, ಶಾಸಕರನ್ನು ಕರೆದುಕೊಂಡು ಬಂದು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ತಮಗೆ ಬೆಂಬಲ ನೀಡುವಂತಹ ಅನಿವಾರ್ಯತೆಯನ್ನು ಬಿಜೆಪಿ ಅಭ್ಯರ್ಥಿ ನಾಯಕರಲ್ಲಿ ಸೃಷ್ಟಿಸಿದ್ದಾರೆಂಬ ಅನುಮಾನ ಮೂಡುತ್ತಿದೆ ಎಂದು ತಿಳಿಸಿದರು.

ಇನ್ನೂ, ಎ.18 ರಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ. ರಾಜಕೀಯ ಪಕ್ಷಗಳಂತೆ ನಾವು ಶಕ್ತಿ ಪ್ರದರ್ಶನದ ಹುಚ್ಚು ಸಾಹಸ ಮಾಡುವುದಿಲ್ಲ. ನಗರದ ಟೌನ್‍ಹಾಲ್‍ನಿಂದ ಜಿಲ್ಲಾಧಿಕಾರಿ ಕಚೇರಿಯವರಿಗೆ ಯಾತ್ರೆಯ ಮೂಲಕ ನಾಮಪತ್ರ ಸಲ್ಲಿಕೆ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News