ಅನಾರೋಗ್ಯದಿಂದ ಎಎಸ್ಐ ಮೃತ್ಯು
Update: 2023-07-21 11:44 IST
ಮುಂಡಗೋಡ: ಇಲ್ಲಿಯ ಪೊಲೀಸ್ ಠಾಣೆಯ ಎಎಸ್ಐ ಸತೀಶ ಮರಳುಸಿದ್ದಪ್ಪನವರ(52) ದೀರ್ಘಕಾಲ ಅನಾರೋಗ್ಯದಿಂದ ಗುರುವಾರ ಮೃತಪಟ್ಟಿದ್ದಾರೆ.
ಅವರ ಸ್ವಂತ ಊರಾದ ರಾಣೇಬೇನ್ನೂರ ತಾಲೂಕಿನಲ್ಲಿ ಅಂತ್ಯಕ್ರಿಯೆ ನಡೆಯಿತು. ಧರ್ಮಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯಲ್ಲಿ ಮುಂಡಗೋಡ ಠಾಣಾ ಪಿಐ ಸಿದ್ದಪ್ಪ ಸಿಮಾನಿ, ಪಿಎಸೈ ಹನಮಂತ ಕುಡಗುಂಟಿ, ವರ್ಗಾವಣೆಗೊಂಡ ಪಿಎಸ್ಐ ಎನ್.ಡಿ.ಜಕ್ಕಣ್ಣವರ ಹಾಗೂ ಸಿಬ್ಬಂದಿ ಭಾಗವಹಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.