ರಾಯಚೂರು| ಗಾಯತ್ರಿ ಭವನದ ಭೂಮಿ ಪೂಜೆ ನೆರೆವೇರಿಸಿದ ಎಂಎಲ್‌ಸಿ ಎ. ವಸಂತ ಕುಮಾರ್
ರಾಯಚೂರು: ನಗರದ ಸಿದ್ದನಾಥ ಕಾಲೋನಿ ಮಂತ್ರಾಲಯ ರಸ್ತೆಯಲ್ಲಿರುವ ಸಮುದಾಯ ಭವನ ನಿರ್ಮಾಣದ ಮುಂದುವರೆದ ಕಾಮಗಾರಿಗೆ 25 ಲಕ್ಷ ರೂ. ಅನುದಾನವನ್ನು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಮಂಜೂರು ಮಾಡಿದ್ದು, ಇಂದು ಕಾಮಗಾರಿ ಪ್ರಾರಂಭಿಸಲು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರಾದ ರಮೇಶ ಕುಲಕರ್ಣಿ ನರಸಿಂಗರಾವ್ ದೇಶಪಾಂಡೆ, ಮೋಹನ ದೇವರು, ಡಿ.ಕೆ ಮುರಳೀಧರ, ಆನಂದ ಫಡ್ವವೀಸ್, ಶ್ರೀನಿವಾಸ ನಂದಾಪುರ, ಸುದೀಂದ್ರ ಜಾಹಗಿರದಾರ, ಸುಧೀರ ಎ., ವೇಣುಗೋಪಾಲ ಇನಾಂದಾರ, ವೆಂಕಟೇಶ ದೇಸಾಯಿ, ಜಯಕುಮಾರ ಗಬ್ಬೂರ, ಪ್ರವೀಣ ಜಾಗಿರದಾರ, ರಾಮರಾವ ಗಣೇಕಲ್, ಅನಿಲಕುಮಾರ ಗಾರಲದಿನ್ನಿ, ವಿನೋದ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಕರೀಂ ಮಾಜಿ ಆರ್ ಡಿ ಎ ಅಧ್ಯಕ್ಷರು, ರಾಮಕೃಷ್ಣ ನಾಯಕ, ಶ್ರೀನಿವಾಸ್ ಶಿಂದೆ, ಮುರಳಿ ಯಾದವ, ಭಷಿರ ಉದ್ಫಿನ ಎ ಪಿ ಎಂ ಸಿ ಉಪಾಧ್ಯಕ್ಷರು, ಅಂಜನ ಕುಮಾರ್, ಮೊಹಮ್ಮದ್ ಉಸ್ಮಾನ್, ಸಯ್ಯದ್ ದಸ್ತಾಗಿರಿ ಹಾಗೂ ಇತರರು ಉಪಸ್ಥಿತರಿದ್ದರು.