×
Ad

ಟೆಲಿಗ್ರಾಂ ಆ್ಯಪ್‌ನಲ್ಲಿ ವಂಚನೆ: 5.56 ಲಕ್ಷ ರೂ. ಕಳೆದುಕೊಂಡ ಶಿವಮೊಗ್ಗದ ಯುವಕ

Update: 2023-08-09 11:51 IST

ಶಿವಮೊಗ್ಗ ಆ.9: ಟೆಲಿಗ್ರಾಂ ಆ್ಯಪ್‌ಗೆ ಬಂದ ಮೆಸೇಜ್ ನಂಬಿ ಹಣ ಹೂಡಿಕೆ ಮಾಡಿದ್ದ ಜಿಲ್ಲೆಯ ಯುವಕನೊಬ್ಬ 5.56 ಲಕ್ಷ ರೂ. ಕಳೆದುಕೊಂಡಿದ್ದಾನೆ.

ಇಂದಿರಾ ಎಂಬ ಹೆಸರಿನಲ್ಲಿ ಜಿಲ್ಲೆಯ ಯುವಕನ (ಹೆಸರು ಗೌಪ್ಯ) ಟೆಲಿಗ್ರಾಂಗೆ ಎ.18ರಂದು ಮೆಸೇಜ್ ಬಂದಿತ್ತು. ಬಿಟ್ ಕಾಯಿನ್‌ನಲ್ಲಿ ಹಣ ಡೆಪಾಸಿಟ್ ಮಾಡಿದರೆ ಅಧಿಕ ಲಾಭಾಂಶ ಸಿಗಲಿದೆ. ಲಾಭದ ಜೊತೆಗೆ ಡೆಪಾಸಿಟ್ ಹಣವನ್ನು ರೀಫಂಡ್ ಮಾಡಲಾಗುತ್ತದೆ ಎಂದು ಮೆಸೇಜ್ ಕಳುಹಿಸಿದ್ದರು. ಇದನ್ನು ನಂಬಿದ ಯುವಕ ತನ್ನ ಬ್ಯಾಂಕ್ ಖಾತೆಯಿಂದ 2.89 ಲಕ್ಷ ರೂ. ತನ್ನ ಸ್ನೇಹಿತರ ಖಾತೆಯಿಂದ 2.67 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದ್ದೆನ್ನಲಾಗಿದೆ.

ಡೆಪಾಸಿಟ್ ಹಣ ಮತ್ತು ಲಾಭವನ್ನು ರೀಫಂಡ್ ಮಾಡಬಹುದು ಎಂದು ಕಾದರೂ ಪ್ರಯೋಜನವಾಗಲಿಲ್ಲ, ವಂಚನೆಗೊಳಗಾಗಿರುವುದು ಅರಿವಾಗುತ್ತಿದ್ದಂತೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News