×
Ad

Gadag | ಈಜಲು ತೆರಳಿದ್ದ ವಿದ್ಯಾರ್ಥಿಗಳಿಬ್ಬರು ನೀರುಪಾಲು

Update: 2026-02-28 18:00 IST

ಗದಗ : ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಗದಗ ತಾಲೂಕಿನ ಮುಳಗುಂದ ಹೊರವಲಯದಲ್ಲಿ ನಡೆದಿದೆ.

9 ನೇ ತರಗತಿಯ 15 ವರ್ಷದ ಬಸವರಾಜ್ ಬಡಿಗೇರ್ ಹಾಗೂ ಪರಶುರಾಮ್ ವಡ್ಡರ್, ನೀರಲ್ಲಿ ಮುಳುಗಿದ ವಿದ್ಯಾರ್ಥಿಗಳು.

ಜಮೀನಿನಲ್ಲಿನ ಮಣ್ಣು ತೆಗೆದ ಬೃಹತ್ ಗುಂಡಿಯಲ್ಲಿ ಬಾಲಕರು ಈಜಲು ಹೋಗಿದ್ದರು. ಈ ವಿದ್ಯಾರ್ಥಿಗಳು ಮುಳಗುಂದದ ಪ್ರೌಢ ಶಾಲೆ ವಿದ್ಯಾರ್ಥಿಗಳಾಗಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಇದ್ದರು.

ಮಧ್ಯಾಹ್ನ ಶಾಲೆ ಮುಗಿಸಿ, ಒಟ್ಟು 6 ಜನ‌ ಸ್ನೇಹಿತರು ಈಜಲು ಹೋಗಿದ್ದಾರೆ. 6 ಜನರಲ್ಲಿ ಈಜಲು ಬಾರದೆ ಇಬ್ಬರು ನೀರಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಈಜು ತಜ್ಞರು, ಅಗ್ನಿಶಾಮಕ ದಳ‌ ಸಿಬ್ಬಂದಿಗಳಿಂದ ಬಾಲಕರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ ಜಿಲ್ಲೆ ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News