×
Ad

Gadag | 14ನೇ ದಿನಕ್ಕೆ ಕಾಲಿಟ್ಟ ಲಕ್ಕುಂಡಿಯ ಉತ್ಖನನ ಕಾರ್ಯ; 45ಕ್ಕೂ ಹೆಚ್ಚು ವಿಶೇಷ ಪ್ರಾಚ್ಯವಸ್ತುಗಳು ಪತ್ತೆ!

Update: 2026-01-31 15:14 IST

ಗದಗ : ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ 14ನೇ ದಿನಕ್ಕೆ ಕಾಲಿಟ್ಟಿದೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಈವರೆಗೂ 45ಕ್ಕೂ ಹೆಚ್ಚು ವಿಶೇಷ ಪ್ರಾಚ್ಯಾವಶೇಷ ವಸ್ತುಗಳು ಪತ್ತೆಯಾಗಿದ್ದು, ಪುರಾತತ್ವ ಇಲಾಖೆ ನಿರ್ದೇಶಕ ಶೇಜೇಶ್ವರ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.

ಲಕ್ಕುಂಡಿಯ ಉತ್ಪನನದ ವೇಳೆ ಸಿಕ್ಕ ಪ್ರಾಚ್ಯವಸ್ತುಗಳ ಕುರಿತು ಮಾತನಾಡಿದ ಐತಿಹಾಸಿಕ ತಜ್ಞ ಷಡಕ್ಷರಯ್ಯಾ, ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಪನದಲ್ಲಿ ಚಿನ್ನದ ನಾಣ್ಯಗಳು, ಪ್ರಾಚ್ಯಾವಶೇಷ ಮತ್ತು ನಾಗ ಮೂರ್ತಿಗಳು ಪತ್ತೆಯಾಗಿವೆ. ಲಕ್ಕುಂಡಿಯ ಸಂಪೂರ್ಣ ಐತಿಹಾಸಿಕ ವಸ್ತುಗಳನ್ನು ಹೊರತೆಗೆಯಲು ಗ್ರಾಮವನ್ನು ಸ್ಥಳಾಂತರಿಸಿ ಸಮಗ್ರ ಉತ್ಪನ ಮಾಡಬೇಕು. ಕೆಲವು ಶಿಲೆ, ಧಾರ್ಮಿಕ ವಸ್ತುಗಳು ನೆಲದ ಮೂರು-ನಾಲ್ಕು ಅಡಿ ಕೆಳಗೆ ಸಿಕ್ಕಿದ್ದು, ನಿಧಿ ಹೇಗೆ ಸಿಕ್ಕಿದೆ ಎಂಬ ಬಗ್ಗೆ ಅನುಮಾನಗಳು ಮೂಡಿವೆ ಎಂದಿದ್ದಾರೆ.

ಲಕ್ಕುಂಡಿ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಪನನ ಕಾರ್ಯದಿಂದ ಶಾಲಾ ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಿವೆ. LKG, UKG ತರಗತಿಗಳ ಮಕ್ಕಳಿಗೆ ಉತ್ಪನನದ ಧೂಳಿನಿಂದ ಕೆಮ್ಮು ನೆಗಡಿ, ವಾಂತಿ ಮತ್ತು ಜ್ವರದ ಸಮಸ್ಯೆಗಳು ಕಾಣಿಸಿಕೊಂಡು, ನರಳಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತುರ್ತು ಕ್ರಮವಾಗಿ ಶಾಲೆ ಸುತ್ತ ಮತ್ತು ಉತ್ಖನನ ಆವರಣದಲ್ಲಿ ಟ್ರಾಕ್ಟರ್ ಮೂಲಕ ನೀರು ಹರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - Darshan T

contributor

Similar News