ಜುಬೈಲ್| SVC ಮೆಗಾ ಕ್ರಿಕೆಟ್ ಕಾರ್ನಿವಲ್ಗೆ ಅದ್ಧೂರಿ ತೆರೆ
ಜುಬೈಲ್: SURATHKAL VISION COMMITTEE (SVC) ಆಶ್ರಯದಲ್ಲಿ ಆಯೋಜಿಸಲಾದ Jubail’s Biggest Mega Cricket Carnival-2026 ಕಾರ್ಯಕ್ರಮವು ನ. 4, 5 ಹಾಗೂ 6ರಂದು ಜುಬೈಲ್ನ ಅಲ್ ಫಲಾಹ್ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ತೆರೆ ಕಂಡಿತು.
ನ. 4ರಂದು ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡ ಈ ಬೃಹತ್ ಕಾರ್ಯಕ್ರಮವು ಸತತ ಮೂರು ದಿನಗಳ ಕಾಲ ಜುಬೈಲ್ನ ಅಲ್ ಫಲಾಹ್ ಕ್ರೀಡಾಂಗಣದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತು. ಕ್ರಿಕೆಟ್ ಪಂದ್ಯಾಟದ ಜೊತೆಗೆ Business Meet, Kids Sports & Games, Family Fest, Food Fest ಹಾಗೂ Achievers Award ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಸಾವಿರಾರು ಕ್ರೀಡಾಭಿಮಾನಿಗಳು, ಮಕ್ಕಳು, ಮಹಿಳೆಯರು ಹಾಗೂ ಕುಟುಂಬಗಳನ್ನು ಆಕರ್ಷಿಸಿದವು.
12 ತಂಡಗಳ ನಡುವೆ ರೋಚಕ ಕ್ರಿಕೆಟ್ ಹಣಾಹಣಿ
ಕಾರ್ನಿವಲ್ನ ಪ್ರಮುಖ ಆಕರ್ಷಣೆಯಾಗಿದ್ದ ಕ್ರಿಕೆಟ್ ಪಂದ್ಯಾಟವು ಮೂರು ದಿನಗಳ ಕಾಲ ಹೊನಲು ಬೆಳಕಿನಲ್ಲಿ ಲೀಗ್ ಮಾದರಿಯಲ್ಲಿ ನಡೆಯಿತು. ಪ್ರತಿಷ್ಠಿತ 12 ತಂಡಗಳು ಭಾಗವಹಿಸಿದ್ದ ಈ ಪಂದ್ಯಾವಳಿಯಲ್ಲಿ ಒಂದಕ್ಕಿಂತ ಒಂದು ರೋಚಕ ಹಾಗೂ ರೋಮಾಂಚನಕಾರಿ ಪಂದ್ಯಗಳು ಕ್ರೀಡಾಭಿಮಾನಿಗಳನ್ನು ರೋಮಾಂಚನಗೊಳಿಸಿದವು. ಅಂತಿಮ ಹಣಾಹಣಿಯಲ್ಲಿ Unified Blues ತಂಡವನ್ನು ಮಣಿಸಿದ Amplitude ತಂಡವು SVC Cricket Carnival-2026ರ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.
ಸಮಾರೋಪ ಸಮಾರಂಭದಲ್ಲಿ SVC ಅಧ್ಯಕ್ಷರಾದ ಅನ್ಸಾಫ್ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಈ ಸಂದರ್ಭದಲ್ಲಿ SVCಯ ಪ್ರಸಕ್ತ ಯೋಜನೆಗಳು, ಸಮುದಾಯದ ಅಭಿವೃದ್ಧಿಗಾಗಿ ಸಂಸ್ಥೆಯು ಕೈಗೊಂಡಿರುವ ವಿವಿಧ ಸಾಮಾಜಿಕ ಹಾಗೂ ಸಂಘಟನಾತ್ಮಕ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಕಾರ್ಯಕ್ರಮದ ಯಶಸ್ಸಿನ ಹಿಂದೆ SVC ಕೋರ್ ಕಮಿಟಿ ಸದಸ್ಯರ ಅವಿರತ ಪರಿಶ್ರಮ, ಮೂರು ದಿನಗಳ ಕಾಲ ಸ್ವಯಂಸೇವಕರು ತೋರಿದ ಶಿಸ್ತು, ಜವಾಬ್ದಾರಿ ಹಾಗೂ ಆತಿಥ್ಯ, SVCಯ ಎಲ್ಲಾ ಸದಸ್ಯರ ಸಹಕಾರ ಮತ್ತು ಪ್ರೋತ್ಸಾಹ ಹಾಗೂ ಸಮುದಾ ಯದ ಜನರ ಸಕ್ರಿಯ ಪಾಲ್ಗೊಳ್ಳುವಿಕೆ ಪ್ರಮುಖ ಕಾರಣಗಳಾಗಿವೆ ಎಂದು ಪ್ರಶಂಸಿಸಿ ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಝಕರಿಯ ಜೋಕಟ್ಟೆ, ನಝೀರ್ ಅಲ್ ಫಲಾಹ್ ಹಾಗೂ BCCI Dubai ಅಧ್ಯಕ್ಷರಾದ ಹಿದಾಯತ್ ಅಡ್ಡೂರು ಅವರು ಮಾತನಾಡಿ, Surathkal Vision Committeeಯ ಸಮುದಾಯಮುಖಿ ಕಾರ್ಯಚಟುವಟಿಕೆಗಳನ್ನು ಹಾಗೂ ಇಂತಹ ಬೃಹತ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ SVC ತಂಡದ ಪರಿಶ್ರಮ, ಸಂಘಟನಾ ಸಾಮರ್ಥ್ಯ ಮತ್ತು ದೂರದೃಷ್ಟಿಯನ್ನು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಗಣ್ಯರ ಉಪಸ್ಥಿತಿ ಹಾಗೂ ಗೌರವ
ಕಾರ್ಯಕ್ರಮದಲ್ಲಿ ಅಬ್ದುಲ್ ರಝಾಕ್ ಕೆಎಂಟಿ, ಹೈದರ್ ಅಲಿ ಯುನೈಟೆಡ್, ತಾಹಿರ್ ಹುಸೇನ್ ಟ್ಯೂಬರ್, ಝಕರಿಯಾ ಜೋಕಟ್ಟೆ ಅಲ್ ಮುಝೈನ್ ಗ್ರೂಪ್, ನಿಶಾನ್ ಎಫ್ಟಿಎಂ ಗ್ರೂಪ್, ನಝೀರ್ ಅಲ್ ಬಾಟಿನ್, ಶರೀಫ್ ಬೋಲಾರ್ ವೈಟ್ ಸ್ಟೋನ್, ಹಿದಾಯತ್ ಅಡ್ಡೂರ್, ಯೂನುಸ್ ಸೈಯದ್, ಇಮ್ರಾನ್ ಸ್ಯಾನಿವೇಟ್, ಹಸನ್ ಸಫ್ವಾನ್ ಎಕ್ಸಲೋನ್, ಶಕಿಲ್ ಸಾಹೇಬ್ ಮಖಾವಿ, ಅಶ್ಫಾಕ್ ಪ್ಲಾಂಟ್ ಸೊಲ್ಯೂಷನ್, ರಝೀಮ್ ಇಬ್ರಾಹಿಂ ಎಕ್ಸೆಲಾನ್, ಸಿನಾನ್ ಓಷನ್ ಬ್ಲಿಟ್ಜ್, ಅಯಾಝ್ ಕೈಕಂಬ ರೈಟ್ ಚೋಯಿಸ್, ಫವಾಝ್, ಅಬ್ದುಲ್ ಬಶೀರ್, ಅಲ್ ಫಲಕ್, ಜುನೈದ್ ಆಂಪ್ಲಿಟ್ಯೂಡ್, ಹಾಗೂ SVC ಉಪಾಧ್ಯಕ್ಷರು ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ನಿವಲ್ನ ಮತ್ತೊಂದು ವಿಶೇಷ ಆಕರ್ಷಣೆಯಾಗಿದ್ದ Achievers Award ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಹಾಗೂ ಸಮಾಜಮುಖಿ ಸೇವೆ ಸಲ್ಲಿಸಿದ ನಾಲ್ವರು ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.
NEET ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು All India Rank 1442 ಹಾಗೂ Foreign Category Rank 1 ಗಳಿಸಿದ ವಿದ್ಯಾರ್ಥಿ ಮೊಹಮ್ಮದ್ ಅಯಾನ್ ಯೂಸುಫ್ ಅವರನ್ನು ಶೈಕ್ಷಣಿಕ ಸಾಧನೆಗಾಗಿ ಗೌರವಿಸಲಾಯಿತು.
ದುಬೈಯಲ್ಲಿ ಅನಿವಾಸಿ ಕನ್ನಡಿಗರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಾ, ಮಾನವೀಯ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ BCCI Dubai ಅಧ್ಯಕ್ಷ ಹಿದಾಯತ್ ಅಡ್ಡೂರು ಅವರನ್ನು ಸಮಾಜಸೇವೆಯ ಗುರುತಾಗಿ ಸನ್ಮಾನಿಸಲಾಯಿತು.
ಅದೇ ರೀತಿ, ಜುಬೈಲ್ನಲ್ಲಿ ಹಲವು ವರ್ಷಗಳಿಂದ ವಿವಿಧ ಸಾಮಾಜಿಕ ಹಾಗೂ ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಂಡು ಅಗತ್ಯವಿರುವವರಿಗೆ ನೆರವಾಗುತ್ತಿರುವ ಕೇರಳ ಮೂಲದ ಸಲೀಂ ಅಬ್ದುಲ್ ರಹೀಮ್ ಅವರನ್ನು ಗೌರವಿಸಲಾಯಿತು.
ಇದಲ್ಲದೆ, ಹಲವು ವರ್ಷಗಳಿಂದ ಜುಬೈಲ್ನಲ್ಲಿ ಮೃತದೇಹಗಳ ಅಂತಿಮ ವಿಧಿವಿಧಾನಗಳಲ್ಲಿ, ವಿಶೇಷವಾಗಿ ಮಯ್ಯತ್ಗೆ ಸ್ನಾನ ಮಾಡಿಸುವ ಪವಿತ್ರ ಸೇವೆಯನ್ನು ನಿಸ್ವಾರ್ಥವಾಗಿ ನಿರ್ವಹಿಸುತ್ತಿರುವ ಬಾಂಗ್ಲಾದೇಶ ಮೂಲದ ದೆಲ್ವಾರ್ ಹುಸೈನ್ ಅವರನ್ನು ಗುರುತಿಸಿ ಗೌರವಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಈ ಸಾಧಕರನ್ನು ಗೌರವಿಸುವ ಮೂಲಕ ಮಾನವೀಯತೆ, ಸೇವಾ ಮನೋಭಾವ ಹಾಗೂ ಸಾಧನೆಗೆ ಪ್ರೋತ್ಸಾಹ ನೀಡುವ ಮಹತ್ವದ ಸಂದೇಶವನ್ನು SVC ಸಾರಿತು.
ಕಾರ್ಯಕ್ರಮದ ಕನ್ವೀನರ್ ಆಗಿ ಆಸೀಫ್ ತಡಂಬೈಲ್ ಅವರು ಕಾರ್ಯನಿರ್ವಹಿಸಿದರು. ತೌಫೀಕ್ ಇಡ್ಯ ಹಾಗೂ ಸಫ್ವಾನ್ ಬಜ್ಪೆ ಅವರು ಕಾರ್ಯಕ್ರಮ ನಿರೂಪಿಸಿದರು.
ಕೇವಲ ಕ್ರಿಕೆಟ್ ಪಂದ್ಯಾವಳಿಗೆ ಸೀಮಿತವಾಗದೆ ಕ್ರೀಡೆ, ಉದ್ಯಮ, ಕುಟುಂಬ ಸಂಭ್ರಮ, ಮಕ್ಕಳ ಪ್ರತಿಭೆ, ಸಾಮಾಜಿಕ ಬಾಂಧವ್ಯ ಹಾಗೂ ಸಾಧಕರಿಗೆ ಗೌರವವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ SVC Cricket Carnival-2026 ಜುಬೈಲ್ನ ಅನಿವಾಸಿ ಕನ್ನಡಿಗರ ಪಾಲಿಗೆ ಸ್ಮರಣೀಯ ಮಹೋತ್ಸವವಾಗಿ ಮೂಡಿಬಂದಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಪ್ರಾಯೋಜಕರು, ಗಣ್ಯರು, ಅತಿಥಿಗಳು, ಆಟಗಾರರು, ಸ್ವಯಂ ಸೇವಕರು, ಸದಸ್ಯರು ಹಾಗೂ ಸಮುದಾಯದ ಪ್ರತಿಯೊಬ್ಬರಿಗೂ SURATHKAL VISION COMMITTEE ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.