ಸಾಂದರ್ಭಿಕ ಚಿತ್ರ | Photo Credit : AP 

ಶಾರ್ಜಾ: ಹಾರ್ಮುಝ್ ಜಲಸಂಧಿಯ ಸಮೀಪ ಟ್ಯಾಂಕರ್‌ ನಿಂದ ತೈಲ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನ 35ಕ್ಕೂ ಹೆಚ್ಚು ಕಡಲತೀರಗಳು ಮತ್ತು ಕರಾವಳಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು Aljazeera ವರದಿ ಮಾಡಿದೆ.

‘ಗಲ್ಫ್ ನ್ಯೂಸ್’ ವರದಿ ಪ್ರಕಾರ, ಅಕ್ಟೋಬರ್ 27ರ ವೇಳೆಗೆ ಶಾರ್ಜಾ, ಉಮ್ ಅಲ್ ಕುವೈನ್ ಮತ್ತು ರಾಸ್ ಅಲ್ ಖೈಮಾ ಪ್ರದೇಶಗಳ 35ಕ್ಕೂ ಹೆಚ್ಚು ಕಡಲತೀರಗಳು ಹಾಗೂ ಕರಾವಳಿ ತಾಣಗಳಲ್ಲಿ ನಿರ್ಬಂಧ ವಿಧಿಸಲಾಗಿದೆ.

ತೈಲ ಸೋರಿಕೆಯಿಂದ ಉಂಟಾಗಬಹುದಾದ ಮಾಲಿನ್ಯವನ್ನು ತಡೆಯಲು ಶಾರ್ಜಾ ನಗರದ ಎಲ್ಲ ಕಡಲತೀರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕಡಲತೀರಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ತೈಲ ಮಾಲಿನ್ಯ ಕರಾವಳಿಯನ್ನು ತಲುಪದಂತೆ ತಡೆಯಲು ವಿಶೇಷ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ಶಾರ್ಜಾ ಮಾಧ್ಯಮ ಕಚೇರಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor