ದುಬೈ : ʼನ್ಯೂ ಸ್ಟಾರ್ ಮಂಗಳೂರುʼ ತಂಡ ತನ್ನ ಅಧಿಕೃತ ಜೆರ್ಸಿ ಅನಾವರಣ ಸಮಾರಂಭವನ್ನು ಸೆ.27ರಂದು (ರವಿವಾರ) ದುಬೈನ ಝಬೀಲ್ ಪಾರ್ಕ್ ನಲ್ಲಿ ಆಯೋಜಿಸಿದೆ.

#PlayWithPassion ಎಂಬ ಧ್ಯೇಯವಾಕ್ಯದೊಂದಿಗೆ ಮುನ್ನಡೆಯುತ್ತಿರುವ ನ್ಯೂ ಸ್ಟಾರ್ ಮಂಗಳೂರು ತಂಡವು, ಹೊಸ ಋತುವಿನ ಆರಂಭಕ್ಕೂ ಮುನ್ನ ಕ್ರೀಡಾ ಪ್ರೇಮಿಗಳನ್ನು ಒಂದೆಡೆ ಸೇರಿಸಿ ತನ್ನ ನೂತನ ಜರ್ಸಿ ಹಾಗೂ ಕಿಟ್‌ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲು ಉದ್ದೇಶಿಸಿದೆ.

ತಂಡದ ಅಭಿಮಾನಿಗಳು, ಹಿತೈಷಿಗಳು ಹಾಗೂ ಯುಎಇಯಲ್ಲಿರುವ ಮಂಗಳೂರು ಮೂಲದವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಜೆರ್ಸಿ ಅನಾವರಣಕ್ಕೆ ಸಾಕ್ಷಿಯಾಗುವಂತೆ ʼನ್ಯೂ ಸ್ಟಾರ್ ಮಂಗಳೂರುʼ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor