ಬೇಲೂರು | ಜಾಗದ ವಿಚಾರ; ವ್ಯಕ್ತಿಯ ಮೇಲೆ ಹಲ್ಲೆ
Update: 2025-09-18 00:24 IST
ಬೇಲೂರು : ತಾಲೂಕಿನ ಅರೇಹಳ್ಳಿ ಹೋಬಳಿಯ ಹಾಡ್ಲಿಗೆರೆ ಗ್ರಾಮದಲ್ಲಿ ಸರಕಾರಿ ಜಾಗದಲ್ಲಿ ಉಳುಮೆ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಗಾಯಾಳು ಚಂದ್ರೇಗೌಡ ಎಂಬವರು ಸುಮಾರು 50 ವರ್ಷಗಳಿಂದ ಸರ್ವೆ ನಂ.55ರಲ್ಲಿ ಸರ್ಕಾರಿ ಗೋಮಾಳದ ಜಾಗದಲ್ಲಿ ಒಂದೂವರೆ ಎಕರೆ ಜಮೀನು ಬೆಳೆ ಬೆಳೆಯುತ್ತಿದ್ದರು. ಇದೇ ಗ್ರಾಮದ ಜಯಲಕ್ಷ್ಮೀ ಮತ್ತು ರೇವಣ್ಣಗೌಡ 4 ಎಕರೆ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಉಳುಮೆ ಮಾಡುತ್ತಿದ್ದು, ಈ ಕುರಿತು ದೀರ್ಘಕಾಲದಿಂದಲೂ ತಕರಾರು ನಡೆಯುತ್ತಿತ್ತು ಎನ್ನಲಾಗಿದೆ