Hassan | ಕಡೆಗರ್ಜೆ ಸುತ್ತಮುತ್ತ ಕಾಡುಕೋಣಗಳ ಹಿಂಡು ಪ್ರತ್ಯಕ್ಷ; ವೀಡಿಯೊ ಸೆರೆ
ಅರೆಹಳ್ಳಿ : ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಕಡೆಗರ್ಜೆ ಗ್ರಾಮದ ಗಡಿಭಾಗದಲ್ಲಿರುವ ಗುಡ್ ಪೇಟಾ ಎಸ್ಟೇಟೀನ ಸುತ್ತ ಮುತ್ತಲಿನಲ್ಲಿ ಕಳೆದ ಸುಮಾರು ಇಪ್ಪತ್ತು ದಿನಗಳಿಂದ ಏಳೆಂಟು ಕಾಡುಕೋಣಗಳ ಗುಂಪು ಕಾಣಿಸಿಕೊಂಡಿರುವುದಲ್ಲದೆ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಈ ವಿಡಿಯೋವನ್ನು ಸಾರ್ವಜನಿಕರೋರ್ವರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಲೆನಾಡು ಭಾಗವಾದ ಅರೇಹಳ್ಳಿ ಹಾಗೂ ಸುತ್ತಮುತ್ತಲಿನಲ್ಲಿ ಈ ಹಿಂದೆ ಕಾಡಾನೆ ಗಳ ಹಾವಳಿ ವಿಪರೀತವಾಗಿದ್ದ ಕಾರಣ ಕೃಷಿಕರು ಹತ್ತಾರು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿ ಪೋಷಿಸಿದಂತಹ ವಿವಿದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸೋಲಾರ್ ವಿದ್ಯುತ್ ತಂತಿ ಬೇಲಿಯತ್ತ ಮೊರೆ ಹೋದ ಪರಿಣಾಮ ಕೆಲ ತಿಂಗಳಿನಿಂದ ಕಾಡಾನೆಗಳು ದೂರ ಸರಿದು ತುಸು ನಿಟ್ಟುಸಿರು ಬಿಡುವಂತಾಗಿದೆ.
ಇದರ ಬೆನ್ನಲ್ಲೇ ಹಲವು ದಿನಗಳಿಂದ ಕಡೆಗರ್ಜೆ ಹಾಗೂ ಸುತ್ತಮುತ್ತಲಿನಲ್ಲಿ ಸುಮಾರು ಏಳೆಂಟು ಕಾಡುಕೋಣಗಳ ಗುಂಪು ಪ್ರತ್ಯಕ್ಷವಾಗಿದ್ದು ಇದೀಗ ಹಲವರಲ್ಲಿ ಆತಂಕ ಎದುರಾಗಿದೆ.