ಚನ್ನರಾಯಪಟ್ಟಣ: ಬೈಕ್ ಅಪಘಾತ: ಸವಾರ ಮೃತ್ಯು
Update: 2025-09-14 09:43 IST
ಚನ್ನರಾಯಪಟ್ಟಣ: ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿಬಿದ್ದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡ ಘಟನೆ ಹಿರೀಸಾವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ಬೈಕ್ ಚಲಾಯಿಸುತ್ತಿದ್ದ ನಾಗಮಂಗಲ ತಾಲೂಕಿನ ಎಂ. ಕೋಡಿಹಳ್ಳಿ ಗ್ರಾಮ ನಿವಾಸಿ ಹನುಮಂತೆಗೌಡ (54) ಮೃತಪಟ್ಟವರು. ಸಹಸವಾರ ತುರುವೇಕೆರೆ ತಾಲೂಕು ಬಿಗ್ಗೇನಹಳ್ಳಿ ನಿವಾಸಿ ಶಾಂತಕುಮಾರ್ ಎಂಬವರು ಗಾಯಗೊಂಡಿದ್ದಾರೆ.
ಇವರಿಬ್ಬರು ಚನ್ನರಾಯಪಟ್ಟಣದಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬರುತ್ತಿದ್ದಾಗ ಹಿರೀಸಾವೆಯ ಅಮ್ಮಕುಟೀರ ಬಳಿ ನಾಯಿಯೊಂದು ಅಡ್ಡ ಬಂತೆನ್ನಲಾಗಿದೆ. ಇದರಿಂದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿಬಿದ್ದು ಈ ಅಪಘಾತ ಸಂಭವಿಸಿದೆ.
ಈ ಬಗ್ಗೆ ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.