Hassan | ʼಮೇರಾ ನಬೀ- ಡೇ ನೈಟ್ ಮೀಲಾದ್ʼ ಕಾರ್ಯಕ್ರಮ ಯಶಸ್ವಿ ಸಮಾಪ್ತಿ

Update: 2026-08-23 20:05 IST

ಹಾಸನ : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (SYS)ವು ʼಸಾರ್ವತ್ರಿಕ ದರ್ಶನದ ಪ್ರವಾದಿʼ ಎಂಬ ಘೋಷಣೆಯೊಂದಿಗೆ ಕಳೆದ ವರ್ಷ ಆರಂಭಿಸಿದ್ದ ʼಮೀಲಾದ್ 1500ʼ ಅಭಿಯಾನವು ಹಾಸನದ ಮಸ್ಜಿದ್ ಖುಬಾದಲ್ಲಿ ನಡೆದ ʼಮೇರಾ ನಬೀ- ಡೇ ನೈಟ್ ಮೀಲಾದ್ʼ ಕಾರ್ಯಕ್ರಮದೊಂದಿಗೆ ಸಮಾರೋಪಗೊಂಡಿತು.

24 ಗಂಟೆಗಳ ಕಾಲ ನಡೆದ ಸಮಾರಂಭವು ಮೌಲಿದ್‌ಗಳು, ಬೈತ್, ನಸೀಹತ್, ಸ್ವಲಾತ್, ದಫ್, ಕವಾಲಿ, ಬಹುಭಾಷಾ ಹಾಡುಗಳು ಮತ್ತಿತರ ಕಾರ್ಯಕ್ರಮಗಳಿಂದ ಸಂಪನ್ನಗೊಂಡಿತು.

ಕಾರ್ಯಕ್ರಮವನ್ನು ರಾಜ್ಯಾಧ್ಯಕ್ಷ ಬಶೀರ್ ಸಅದಿ ಅಧ್ಯಕ್ಷತೆಯಲ್ಲಿ ಸಯ್ಯದ್ ಎಪಿಎಸ್ ತಂಙಳ್ ಚಿಕ್ಕಮಗಳೂರು ಅವರು ಉದ್ಘಾಟಿಸಿದರು. ಸಯ್ಯಿದ್ ಶಾಫಿ ನಈಮಿ ತಂಙಳ್ ಸಕಲೇಶಪುರ, ಸಯ್ಯಿದ್ ಇಲ್ಯಾಸ್ ತಂಙಳ್ ಎಮ್ಮೆಮಾಡು, ಸಯ್ಯಿದ್ ಸಿದ್ದೀಕ್ ತಂಙಳ್ ತೀರ್ಥಹಳ್ಳಿ, ಜಂಇಯ್ಯತುಲ್ ಉಲಮಾ ಜಿಲ್ಲಾಧ್ಯಕ್ಷ ಸೈದಲವೀ ಸಖಾಫಿ, ಮೌಲಾನಾ ಹಬೀಬುಲ್ಲಾಹ್ ರಝ್ವಿ ವಿವಿಧ ವೇದಿಕೆಗಳಲ್ಲಿ ಪ್ರಾರ್ಥನೆಗೆ ನೇತೃತ್ವ ನೀಡಿದರು.

ಮುಫ್ತಿ ಮಂಝರುಲ್ ಹಖ್, ನಾಸಿರ್ ಹುಸೈನ್ ರಝ್ವಿ, ಮುಹಮ್ಮದ್ ತಖೀ ರಝ್ವಿ ಮತ್ತಿತರರು ನಸೀಹತ್ ನೀಡಿದರು. ಸಯ್ಯಿದ್ ನೂಮಾನ್ ತಂಙಳ್, ಹಾಫಿಳ್ ಜಿ ಎಂ ಸುಲೈಮಾನ್ ಹನೀಫಿ, ಅಶ್ರಫ್ ಅಹ್ಸನಿ ಕೊಂಡಂಗೇರಿ ಮೌಲಿದ್‌ಗೆ ನೇತೃತ್ವ ನೀಡಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಡಾ.ಫಾಝಿಲ್ ರಝ್ವಿ ನೇತೃತ್ವದಲ್ಲಿ ನಡೆದ ಬುರ್ದಾ ದಲ್ಲಿ ಆರಿಫ್ ಸಅದಿ ಭಟ್ಕಳ, ಶಂಸೀರ್ ಮಳ್ಹರಿ ಮಂಗಳೂರು, ಅಸ್ರೀಫ್ ಮಳ್ಹರಿ ಮಂಜನಾಡಿ, ಶುಹೈಬ್ ಸಅದಿ, ಅಲೀ ಸಅದಿ, ಬಾಲ ಗಾಯಕ ಮಾಸ್ಟರ್ ಮುಹಮ್ಮದ್ ಕನ್ಯಾನ ಗಾಯನ ಹಾಡಿದರು.

ಮೀಲಾದ್ ಸೌಹಾರ್ದ ಸಂಗಮವನ್ನು ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್ ಉದ್ಘಾಟಿಸಿದರು. ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಮೌಲಾನಾ ಶಾಫಿ ಸಅದಿ, ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಡಾ.ಝೈನಿ ಕಾಮಿಲ್, ಎಸ್ ಎಸ್ ಎಫ್ ರಾಜ್ಯ ಕೋಶಾಧಿಕಾರಿ ಅನ್ವರ್ ಅಸ್‌ಅದಿ ಬೆಂಗಳೂರು, ಡಾ. ಬಶೀರ್ ಜನಪ್ರಿಯ ಪ್ರವಾದಿ ಸಂದೇಶವನ್ನು ಪ್ರತಿಪಾದಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಬಶೀರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಹಸೈನಾರ್ ಆನೆಮಹಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಸ್ ಜೆ ಎಂ ರಾಜ್ಯಾಧ್ಯಕ್ಷ ಅಬ್ದುಲ್ ರಹ್ಮಾನ್ ಮದನಿ, ಎಸ್ ಎಂ ಎ ಜಿಲ್ಲಾಧ್ಯಕ್ಷ ಝಾಕಿರ್ ಯಾದ್‌ಗಾರ್, ಪ್ರಮುಖರಾದ ಯೂಸುಫ್ ಹಾಜಿ ಉಪ್ಪಳ್ಳಿ, ಹಕೀಂ ಕೊಡ್ಲಿಪೇಟೆ, ಆರಿಫ್, ಆಸಿಫ್ ಆಶು, ಗಫ್ಫಾರ್ ಹಾಜಿ, ಸಲೀಂ ಹಾಜಿ, ಇಸ್ಮಾಯಿಲ್ ಜೆ ಎಸ್, ಅಕ್ರಂ ಖಾನ್ , ಯೂಸುಫ್ ಏಷಿಯನ್ , ಅಬ್ದುಲ್ಲಾ ಆಲೂರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕೆ ಎಂ ಅಬೂಬಕರ್ ಸಿದ್ದೀಖ್ ಸ್ವಾಗತಿಸಿ, ಮನ್ಸೂರ್ ಕೋಟೆಗದ್ದೆ ಧನ್ಯವಾದವಿತ್ತರು.



 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News