×
Ad

ಹಾಸನ | ಉದ್ಯಮಿ ಕೃಷ್ಣೇಗೌಡ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2024-01-31 23:17 IST

ಹಾಸನ:  ಜೆಡಿಎಸ್ ಮುಖಂಡ ಹಾಗೂ ಗ್ರಾನೈಟ್ ಉದ್ಯಮಿ ಕೃಷ್ಣೇಗೌಡರ ಕೊಲೆಗೈದ ಇಬ್ಬರೂ ಪ್ರಮುಖ ಹಂತಕರನ್ನು 6 ತಿಂಗಳ ನಂತರ ಸಿಐಡಿ ಹಾಗೂ ಜಿಲ್ಲಾ ಪೊಲೀಸ್ ಸಹಕಾರದಿಂದ ಬಂಧಿಸಲಾಗಿದೆ ಎಂದು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಮಾಹಿತಿ ನೀಡಿದರು.

ಜಿಲ್ಲಾ ಎಸ್ಪಿ ಕಛೇರಿಯ ಸಭಾಂಗಣದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಪ್ರಮುಖ ಆರೋಪಿಗಳಾದ ಯೋಗಾನಂದ (38) ಮಂಜುನಾಥ್ ಅಲಿಯಾಸ್ ಅನಿಲ್ (32) ಎಂಬುವರು ಬಂದಿಸಲಾಗಿದೆ ಎಂದರು.

ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಇದಾದ ನಂತರ ತನಿಖೆಯಲ್ಲಿ ಮಾಹಿತಿ ಕಲೆ ಹಾಕಿದಾಗ ತುಮಕೂರು ಜಿಲ್ಲೆಯ ತುರುವೇಕೆರೆ ಗ್ರಾಮದ ತೋಟದ ಮನೆಯೊಂದರಲ್ಲಿ ಅರೋಪಿಗಳು ಇರುದನ್ನು ಖಚಿತ ಪಡಿಸಿ ಬಂಧಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News