×
Ad

ಹಾಸನ | ನೂತನ ಮನೆ ಕ್ಯೂರಿಂಗ್‌ಗೆ ನೀರನ್ನು ಹಾಕದಿರುವ ವಿಚಾರಕ್ಕೆ ಜಗಳ: ತಂದೆಯನ್ನೇ ಹತ್ಯೆಗೈದ ಮಗ

Update: 2024-02-06 23:10 IST

ಹಾಸನ: ನೂತನ ಮನೆ ನಿರ್ಮಾಣದ ವೇಳೆ ಕ್ಯೂರಿಂಗ್ ಗೆ ನೀರನ್ನು ಹಾಕಿಲ್ಲ ಎನ್ನುವ ಸಂಬಂಧ ತಂದೆ ಮಗನ ಮಧ್ಯ ಗಲಾಟೆ ಸಂಭವಿಸಿ ತಂದೆಯನ್ನೇ  ಕೊಲೆ ಮಾಡಿದ ಮಗನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಮಾಹಿತಿ ನೀಡಿದರು.

ಎಸ್ಪಿ ಕಛೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರು, ಮೃತ ತಂದೆಯನ್ನು ರವಿ (50) ಎಂದು ಗುರುತಿಸಲಾಗಿದ್ದು, ಆರೋಪಿ ಮಗ ಸುದೀಪ್ (27) ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಜನವರಿ 31 ರಂದು ರಾತ್ರಿ ಸುಮಾರು 10:30 ಗಂಟೆ ಸಮಯದಲ್ಲಿ ಅಪ್ಪ ಮತ್ತು ಮಗ ಮನೆಯ ಆರ್.ಸಿ.ಸಿ ಮೇಲೆ ಪರಸ್ಪರ ಮಾತಿಗೆ ಮಾತು ಬೆಳೆದು, ಗಲಾಟೆ ಸಂಭವಿಸಿ ಮಗ ಸುದೀಪ್ ತಂದೆಯನ್ನು ಹೊಡೆದು ಕೊಲೆ ಮಾಡಿದ್ದಾನೆ. ಈ ಬಗ್ಗೆ ಸಂಬಂಧಿಕರು ನೀಡಿದ ದೂರಿನ ಅನ್ವಯ ತನಿಖೆ ನಡೆಸಿ ಮಗನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News