×
Ad

ಸಕಲೇಶಪುರ: ಎತ್ತಿನ ಹೊಳೆ ಯೋಜನೆಯ ಪ್ರಯೋಗಿಕ ಹಂತದ ಪೈಪ್ ಲೈನ್ ಬಿರುಕು ಬಿಟ್ಟು ನೀರು ಸೋರಿಕೆ

Update: 2023-12-01 16:20 IST

ಸಕಲೇಶಪುರ: ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆಯ ಪ್ರಯೋಗಿಕ ಹಂತದ ಪೈಪ್ ಲೈನ್ ಬಿರುಕು ಬಿಟ್ಟು ನೀರು ಸೋರಿಕೆ ಪರಿಣಾಮ ನಡಹಳ್ಳಿ ಗ್ರಾಮದ ರಸ್ತೆ ಸಂಪೂರ್ಣ ಕೆಸರು ಮಯವಾಗಿದೆ.

ಪ್ರಯೋಗಿಕವಾಗಿ ನೀರುಹರಿಸಲಾಗುತ್ತಿರುವ ಕಬ್ಬಿಣದ ಪೈಪ್ ಲೀಕೇಜ್ ಪರಿಣಾಮ ಭೂಮಿಯ ಒಳಗಿನಿಂದ ನೀರು ಜಿಮ್ಮುವ ದೃಶ್ಯ ಗೋಚರಿಸುತ್ತಿದೆ. ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಿಂದ ಬೆಂಗಳೂರು ತುಮಕೂರು ಸೇರಿದಂತೆ ಅನೇಕ ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದು ಹೇಳಲಾಗುತ್ತದೆ.

ಕಳೆದ ಎರಡು ದಿನಗಳ ಹಿಂದೆ ತಾಲ್ಲೂಕಿನ ಹೆಬ್ಬಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಾಗದ್ದೆ, ದೇಖಲ, ಕುಂಬರಡಿ ಸೇರಿದಂತೆ ಹಲವೆಡೆ ಪೈಪ್‌ಗಳಿಂದ ಭಾರೀ ಪ್ರಮಾಣದ ನೀರು ಸೋರಿಕೆ ಆಗಿತ್ತು. ಕಾಡು ಮನೆಯಿಂದ ದೊಡ್ಡನಾಗರ ನೀರು ಶೇಖರಣಾ ಕೇಂದ್ರದವರೆಗೆ, ಮುಖ್ಯ ರಸ್ತೆಯ ಬದಿಯಲ್ಲಿಯೇ  6 ಕಿ.ಮೀ. ಉದ್ದ ಪೈಪ್‌ಲೈನ್ ಮೂಲಕ ಕಾಡಮನೆ ಚೆಕ್‌ಡ್ಯಾಂ 5 ರ ಒಂದು ಪಂಪ್‌ನಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತಿದೆ. ಲೀಕೇಜ್ ನಂತರ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ.

ಈ ಭಾಗಗಳ ಮೂಲಕ ಗ್ರಾಮಗಳಿಗೆ ತೆರಳುವ ವಾಹನ ಸಂಚಾರಕ್ಕೆ ಇದರಿಂದ ಬಹಳ ಕಷ್ಟವಾಗುತ್ತಿದೆ. ಇದರಿಂದ ಬೇಸತ್ತು ಗ್ರಾಮಸ್ಥರು ಕಾಮಗಾರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News