ಎಸೆಸೆಲ್ಸಿ ಫಲಿತಾಂಶ : ಹಾಸನದ ಉತ್ಸವ್ ಪಟೇಲ್‌ಗೆ 625 ಅಂಕ
Update: 2025-05-02 17:37 IST
ಉತ್ಸವ್ ಪಟೇಲ್
ಹಾಸನ: ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಹಾಸನ ನಗರದ ವಿಜಯ ಸ್ಕೂಲ್‌ನ ವಿದ್ಯಾರ್ಥಿ ಉತ್ಸವ್ ಪಟೇಲ್ 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಉತ್ಸವ್ ಪಟೇಲ್ ಡಿ.ಟಿ.ಪ್ರಕಾಶ್ ಮತ್ತು ಆಶಾರಾಣಿ ದಂಪತಿಯ ಪುತ್ರ. ಎಸೆಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಉತ್ಸವ್ ಪಟೇಲ್ ಗೆ ವಿಜಯ ಸ್ಕೂಲ್‌ನ ಆಡಳಿತ ಮಂಡಳಿ, ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.