×
Ad

ಹಾವೇರಿ| ಲಾಡ್ಜ್ ನಲ್ಲಿ ತಂಗಿದ್ದವರ ಮೇಲೆ ಹಲ್ಲೆ, ಅನೈತಿಕ ಪೊಲೀಸ್ ಗಿರಿ : ಇಬ್ಬರ ಬಂಧನ

Update: 2024-01-10 19:59 IST

ಹಾವೇರಿ: ಖಾಸಗಿ ಲಾಡ್ಜ್ ನಲ್ಲಿ ತಂಗಿದ್ದ ಪುರುಷ ಮತ್ತು ಮಹಿಳೆ ಮೇಲೆ ಯುವಕರ ತಂಡ ಹಲ್ಲೆ ನಡೆಸಿ, ಅನೈತಿಕ ಪೊಲೀಸ್‌ಗಿರಿ ನಡೆಸಿರುವ ಘಟನೆ ಹಾನಗಲ್ ತಾಲೂಕಿನ ನಾಲ್ಕರ ಕ್ರಾಸ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಹಾನಗಲ್ಲ ಸಮೀಪದ ನಾಲ್ಕರ ಕ್ರಾಸ್‌ನಲ್ಲಿರುವ ಲಾಡ್ಜ್‌ನಲ್ಲಿ ಪರುಷ ಹಾಗೂ ವಿವಾಹಿತ ಮಹಿಳೆ ಸೋಮವಾರ ಮಧ್ಯಾಹ್ನದ ವೇಳೆಗೆ ರೂಮ್‌ ಪಡೆದಿದ್ದರು ಎನ್ನಲಾಗಿದೆ. ಬುರ್ಕಾ ಧರಿಸಿ ಹಿಂದೂ ಪುರುಷನ ಜತೆ ಕಾಣಿಸಿಕೊಂಡಿದ್ದ ಮಹಿಳೆಯನ್ನು ಗಮನಿಸಿದ್ದ ಆಟೋ ಚಾಲಕ, ಹಲ್ಲೆ ನಡೆಸಿರುವ  ಯುವಕರ ತಂಡಕ್ಕೆ ಮಾಹಿತಿ ನೀಡಿದ್ದ ಎಂದು ತಿಳಿದು ಬಂದಿದೆ.

ಮಾಹಿತಿಯಂತೆ ಅಕ್ಕಿ ಆಲೂರಿನ ನಾಲ್ಕೈದು ಯುವಕರ ತಂಡ ಲಾಡ್ಜ್‌ನ ಕೊಠಡಿಗೆ ತೆರಳಿ ಇಬ್ಬರನ್ನೂ ಥಳಿಸಿದ್ದಾರೆ ಎನ್ನಲಾಗಿದೆ. ಮಹಿಳೆಯನ್ನು ಎಳದಾಡಿ ಬಟ್ಟೆ ಹರಿದು ಹಲ್ಲೆ ಮಾಡಿರುವ ವೀಡಿಯೊ ಚಿತ್ರೀಕರಣ ಮಾಡಿದ್ದು, ವೈರಲ್ ಆಗಿದೆ.

ವೀಡಿಯೋ ವೈರಲ್ ಆದ ಬಳಿಕ ಲಾಡ್ಜ್ ನ ರೂಮ್ ಬಾಯ್ ದಾಂಧಲೆ ನಡೆಸಿರುವ ಕುರಿತು ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News