×
Ad

ಹಾವೇರಿ‌ | ಗುತ್ತಿಗೆದಾರನ ಹತ್ಯೆ ಪ್ರಕರಣ; ಪೊಲೀಸರಿಂದ ಆರೋಪಿಗಳ ಕಾಲಿಗೆ ಗುಂಡೇಟು

Update: 2025-06-26 10:00 IST

ಹಾವೇರಿ: ಪ್ರಥಮ ದರ್ಜೆಯ ಗುತ್ತಿಗೆದಾರ ಶಿವಾನಂದ ಕುನ್ನೂರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿರುವ ಘಟನೆ ಹಾನಗಲ್ ತಾಲೂಕಿನ  ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೊಂಡೋಜಿ ಕ್ರಾಸ್ ಬಳಿ ಗುರುವಾರ ನಡೆದಿದೆ.

ಆರೋಪಿಗಳಾದ ಅಶ್ರಫ್, ನಾಗರಾಜ್‌ ಸವದತ್ತಿ ಯನ್ನು ವಶಕ್ಕೆ ಪಡೆಯುವಾಗ ಶಿಗ್ಗಾಂವಿ ಸಿಪಿಐ ಸತ್ಯಪ್ಪ ಮಾಳಗೊಂಡ ಮತ್ತು ಪಿಎಸ್ಐ ಸಂಪತ್ ಅವರು ಆರೋಪಿಗಳ ಕಾಲಿಗೆ ಫೈರಿಂಗ್‌ ನಡೆಸಿದ್ದಾರೆ.

ಗಾಯಾಳು  ಆರೋಪಿಗಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ‌ ಹಾವೇರಿ ಎಸ್ಪಿ ಅಂಶುಕುಮಾರ್ ನೇತೃತ್ವದಲ್ಲಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News