ಸಾಂದರ್ಭಿಕ ಚಿತ್ರ   (AI Generated)

ಈ ಹಿಂದೆ ಇಡೀ ದೇಹಕ್ಕೆ ಒಂದೇ ಜೈವಿಕ ವಯಸ್ಸು ಎಂದು ಭಾವಿಸಲಾಗಿತ್ತು. ಆದರೆ ಜೈವಿಕ ವಯಸ್ಸಾಗುವ ಪ್ರಕ್ರಿಯೆ ಲಿಂಗ, ನಿರ್ದಿಷ್ಟ ಅಂಗ ಮತ್ತು ಆಣ್ವಿಕ ವ್ಯವಸ್ಥೆಗಳ ಆಧಾರದ ಮೇಲೆ ರೂಪಿತವಾಗುತ್ತವೆ ಎಂದು ಹೊಸ ಸಂಶೋಧನೆ ಕಂಡುಹಿಡಿದಿದೆ.

ನಾವು ಹುಟ್ಟಿದ ದಿನದಿಂದ ಲೆಕ್ಕ ಹಾಕುವ ಸಾಮಾನ್ಯ ವಯಸ್ಸು ಎಲ್ಲರಿಗೂ ವೇಗದಲ್ಲಿ ಚಲಿಸುತ್ತದೆ. ಆದರೆ ನಮ್ಮ ದೇಹದ ಜೀವಕೋಶಗಳು, ಅಂಗಾಂಗಗಳು ಮತ್ತು ಆಂತರಿಕ ವ್ಯವಸ್ಥೆಗಳು ಎಷ್ಟು ಆರೋಗ್ಯವಾಗಿವೆ ಎಂಬುದರ ಆಧಾರದ ಮೇಲೆ ನಿರ್ಧಾರವಾಗುವುದು ಜೈವಿಕ ವಯಸ್ಸು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಅಂದರೆ ವಯಸ್ಸಾಗುವುದು ಎಲ್ಲರಿಗೂ ಒಂದೇ ಸಮನಾಗಿರುವುದಿಲ್ಲ. ಒಬ್ಬರ ಮೆದುಳು ಆರೋಗ್ಯವಾಗಿದ್ದು, ಜೀರ್ಣಕ್ರಿಯೆಗೆ ಮುಪ್ಪಡರಿರಬಹುದು. ಇನ್ನೊಬ್ಬರಲ್ಲಿ ರೋಗ ನಿರೋಧಕ ಶಕ್ತಿ ಕ್ಷೀಣಿಸಿರಬಹುದು. ಆದರೆ ಮೆದುಳು ಚುರುಕಾಗಿರಬಹುದು.

ಈಗ ಈ ಸಮೀಕರಣಕ್ಕೆ ಲಿಂಗವನ್ನು ಸೇರಿಸಿ ನೋಡಿ. ವಯಸ್ಸಾಗುವಿಕೆಗೆ ಸಂಬಂಧಿಸಿದ ಜೈವಿಕ ಪ್ರಕ್ರಿಯೆಗಳು ಮಹಿಳೆಯರು ಮತ್ತು ಪುರುಷರಲ್ಲಿ ಒಂದೇ ರೀತಿ ಹಂಚಿಕೆಯಾಗದೆ ಇರಬಹುದು. ಒಂದು ವೇಳೆ ಹಾಗಿದ್ದಲ್ಲಿ ಪ್ರತಿಯೊಬ್ಬರನ್ನೂ ಜೈವಿಕವಾಗಿ ಸಮಾನ ಎಂದು ಪರಿಗಣಿಸುವ ಸಂಶೋಧನಾ ಮಾದರಿಯು ಸಂಶೋಧಕರು ಪತ್ತೆಹಚ್ಚಲು ಪ್ರಯತ್ನಿಸುತ್ತಿರುವ ಸೂಕ್ಷ್ಮ ವ್ಯತ್ಯಾಸಗಳನ್ನೇ ಇಲ್ಲದಂತೆ ಮಾಡಬಹುದು.

ನೇಚರ್ನಲ್ಲಿ ಪ್ರಕಟವಾದ ಹೊಸ ಬಹು-ಸಮೂಹ ಮತ್ತು ಬಹುಸಂಶೋಧಕರ ಅಧ್ಯಯನವು ಇದೇ ವಿಚಾರವನ್ನು ಗಮನಿಸಿದೆ. ಜೈವಿಕ ವಯಸ್ಸಾಗುವಿಕೆಯನ್ನು ‘ಒಂದು ವಯಸ್ಸಾದ ಗಡಿಯಾರ’ ವಿವರಿಸುತ್ತದೆ ಎಂದು ಊಹಿಸುವ ಬದಲು ಲಿಂಗ ಮತ್ತು ಅಂಗ ಎರಡನ್ನೂ ಗಣನೆಗೆ ತೆಗೆದುಕೊಳ್ಳುವ ರೀತಿಯಲ್ಲಿ ಅಳೆಯಬೇಕಾಗಿ ಬರಬಹುದು.

ಈ ಆಲೋಚನೆಯನ್ನು ಪರೀಕ್ಷಿಸಲು ಸಂಶೋಧಕರು ಮೂರು ವಿಭಿನ್ನ ಮೂಲಗಳ ಜೈವಿಕ ಮಾಹಿತಿ ಬಳಸಿಕೊಂಡು 15 ಅಂಗವ್ಯೂಹಗಳನ್ನು ಒಳಗೊಂಡಿರುವ ಒಟ್ಟು 38 ಜೈವಿಕ ವಯಸ್ಸಿನ ಗಡಿಯಾರಗಳನ್ನು ಸಿದ್ಧಪಡಿಸಿದರು. ಆ ಮೂರು ಮಾಹಿತಿ ಮೂಲಗಳೆಂದರೆ ರಕ್ತದಲ್ಲಿ ಚಲಿಸುವ ಪ್ರೊಟೀನ್ಗಳು, ಮೆಟಬೊಲೈಟ್ಗಳು ಮತ್ತು ಅಂಗಾಂಗಗಳ MRI ಸ್ಕ್ಯಾನ್ ವರದಿಗಳು. ಇಲ್ಲಿ ಮುಖ್ಯವಾಗಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿಯೇ ಈ ಮಾದರಿಗಳನ್ನು ರೂಪಿಸಿದರು. ಈ ಸಂಶೋಧನೆಯಿಂದ ಅವರಿಗೆ ತಿಳಿದು ಬಂದಿದ್ದೇನೆಂದರೆ ವಯಸ್ಸಾಗುವಿಕೆ ಕೆಲವು ಅಂಶಗಳು ಲಿಂಗ ಆಧಾರಿತವಾಗಿದ್ದರೆ, ಇನ್ನು ಕೆಲವು ನಿರ್ದಿಷ್ಟ ಅಂಗಾಂಗಗಳಿಗೆ ಸೀಮಿತವಾಗಿದ್ದವು. ಮತ್ತು ಹಲವು ಅಂಶಗಳು ಇಬ್ಬರಲ್ಲೂ ಸಮಾನವಾಗಿದ್ದವು. ಈ ಸಂಶೋಧನೆಯು ಜೈವಿಕ-ವಯಸ್ಸಿನ ಗಡಿಯಾರವನ್ನು ಕೇವಲ ಒಂದು ಸರಳ ‘ಅಳತೆ ಸಮಸ್ಯೆ’ಯಾಗಿ ಉಳಿಸದದೆ, ಒಂದು ಸಂಕೀರ್ಣ ‘ಮಾದರಿ ರೂಪಿಸುವ ಸಮಸ್ಯೆ’ಯಾಗಿ ಪರಿವರ್ತಿಸಿದೆ.

ಈ ಹಿಂದೆ ಇಡೀ ದೇಹಕ್ಕೆ ಒಂದೇ ಜೈವಿಕ ವಯಸ್ಸು ಎಂದು ಭಾವಿಸಲಾಗಿತ್ತು. ಆದರೆ ಜೈವಿಕ ವಯಸ್ಸಾಗುವ ಪ್ರಕ್ರಿಯೆ ಲಿಂಗ, ನಿರ್ದಿಷ್ಟ ಅಂಗ ಮತ್ತು ಆಣ್ವಿಕ ವ್ಯವಸ್ಥೆಗಳ ಆಧಾರದ ಮೇಲೆ ರೂಪಿತವಾಗುತ್ತವೆ ಎಂದು ಈ ಹೊಸ ಸಂಶೋಧನೆ ಕಂಡುಹಿಡಿದಿದೆ.

ಒಂದೇ ಜೈವಿಕ ವಯಸ್ಸು ಇಲ್ಲದಾದಾಗ ಏನಾಗುತ್ತದೆ?

ನಮ್ಮ ವಯಸ್ಸು ನಮಗೆ ತಿಳಿದಿದೆ. ಅದು ಜನನ ಪ್ರಮಾಣಪತ್ರದಲ್ಲಿರುವ ಸಂಖ್ಯೆ. ಆದರೆ ಜೈವಿಕ ವಯಸ್ಸು ಬೇರೆ. ವಿಜ್ಞಾನಿಗಳು ‘ವಯಸ್ಸಾಗುವ ಗಡಿಯಾರ’ಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಇವು ಒಬ್ಬ ವ್ಯಕ್ತಿಯ ಜೈವಿಕ ಸ್ಥಿತಿಯು ಅದೇ ಕಾಲಾನುಕ್ರಮದ ವಯಸ್ಸಿನ ಇತರರಿಗೆ ಹೋಲಿಸಿದರೆ ಎಷ್ಟು ವಯಸ್ಸಾದಂತೆ ಕಾಣುತ್ತದೆ ಎಂಬುದನ್ನು ಅಂದಾಜಿಸುತ್ತವೆ. ಕೆಲವರು ಮುದಿತನದಲ್ಲೂ ಆರೋಗ್ಯವಾಗಿರುತ್ತಾರೆ ಮತ್ತು ಇತರರು ಬೇಗನೇ ಕಾಯಿಲೆಗೆ ತುತ್ತಾಗುತ್ತಾರೆ. ಇದಕ್ಕೆ ಕಾರಣವನ್ನು ಗಡಿಯಾರಗಳು ಪತ್ತೆಹಚ್ಚಬಹುದು ಎಂಬುದು ವಿಜ್ಞಾನಿಗಳ ಆಶಯವಾಗಿದೆ. ಆದರೆ ಇಡೀ ದೇಹದ ಸ್ಥಿತಿ ಕೇವಲ ಒಂದು ಒಂಟಿ ಸಂಖ್ಯೆಯಲ್ಲಿ ಅಳೆಯುವ ಆಲೋಚನೆಯಲ್ಲಿ ಮಾತ್ರ ಸಮಸ್ಯೆಯಿದೆ.

ಹೆಣ್ಣು ಮತ್ತು ಗಂಡುಗಳನ್ನು ಪ್ರತ್ಯೇಕವಾಗಿಟ್ಟು ನೋಡಿದಾಗ ಕೆಲವು ‘ವಯಸ್ಸಾಗುವ ಗಡಿಯಾರ’ಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದವು. ದೇಹದ ಕೊಬ್ಬು, ರೋಗ ನಿರೋಧಕ ವ್ಯವಸ್ಥೆ ಮತ್ತು ಚಯಾಪಚಯ ಕ್ರಿಯೆಯನ್ನು ಒಳಗೊಂಡ ಕೆಲವು ಅಳತೆಗಳಿಗೆ ಇದು ವಿಶೇಷವಾಗಿ ಸ್ಪಷ್ಟವಾಗಿತ್ತು. ಆದರೆ ಲಿಂಗಗಳನ್ನು ವಿಭಜಿಸುವುದರಿಂದ ಯಾವುದೇ ಸಾರ್ವತ್ರಿಕ ಪ್ರಯೋಜನವಿರಲಿಲ್ಲ.

ಭಿನ್ನ ಕತೆ ಹೇಳುವ ಜೀನ್ಗಳು

ಸಂಶೋಧಕರು ತಳಿಶಾಸ್ತ್ರವನ್ನೂ ಸಹ ಗಮನಿಸಿದರು. ವಯಸ್ಸಾಗುವಿಕೆಯ ಅಳತೆಗಳಲ್ಲಿ 359 ಗಮನಾರ್ಹ ಅನುವಂಶಿಕ ಸಂಬಂಧಗಳನ್ನು ಕಂಡುಕೊಂಡರು. ಮತ್ತೊಮ್ಮೆ, ಮಾದರಿಗಳು ಲಿಂಗ ಮತ್ತು ಅಂಗದಿಂದ ಬದಲಾಗುತ್ತವೆ. ಕೆಲವು ಯಕೃತ್ತು ಮತ್ತು ಜೀರ್ಣಕ್ರಿಯೆಯಲ್ಲಿ ವಯಸ್ಸಾಗುವಿಕೆ ಅಳತೆಗಳು ಮಹಿಳೆಯರಲ್ಲಿ ಬಲವಾದ ಆನುವಂಶಿಕ ಸಂಕೇತಗಳನ್ನು ತೋರಿಸಿದವು. ಆದರೆ ಕೆಲವು ರೋಗನಿರೋಧಕ, ಚರ್ಮ ಮತ್ತು ಗುಲ್ಮ ಅಳತೆಗಳು ಪುರುಷರದಲ್ಲಿ ಬಲವಾದ ಸಂಕೇತಗಳನ್ನು ತೋರಿಸಿದವು. ಆಸಕ್ತಿದಾಯಕ ಸಂದೇಶವೆಂದರೆ ದೇಹದ ವಿವಿಧ ಭಾಗಗಳು ಅನುವಂಶಿಕ ಮತ್ತು ಪರಿಸರ ಪ್ರಭಾವಗಳ ವಿಭಿನ್ನ ಮಿಶ್ರಣ ಹೊಂದಿರಬಹುದು ಮತ್ತು ಮಿಶ್ರಣಗಳು ಮಹಿಳೆಯರು ಮತ್ತು ಪುರುಷರ ನಡುವೆ ಭಿನ್ನವಾಗಿರಬಹುದು. ಅಂದರೆ ವಯಸ್ಸಾಗುವಿಕೆಗೆ ಒಂದೇ ಅನುವಂಶಿಕ ನೀಲನಕ್ಷೆ ಇಲ್ಲದೆ ಇರಬಹುದು.

ಹಳೆಯ ಅಂಗಗಳು ಭಿನ್ನ ಕಾರಣ ಹೊಂದಿರಬಹುದು

ಸಂಶೋಧಕರು ರಕ್ತದಲ್ಲಿ ಪರಿಚಲನೆಗೊಳ್ಳುವ 2,923 ಪ್ರೊಟೀನ್ಗಳಿಗೆ ಏಳು ಇಮೇಜಿಂಗ್ ಆಧಾರಿತ ವಯಸ್ಸಾಗುವಿಕೆ ಕ್ರಮಗಳನ್ನು ಜೋಡಿಸಿದ್ದಾರೆ. ಈ ಪ್ರೊಟೀನ್ಗಳು ಮಹಿಳೆಯರು ಮತ್ತು ಪುರುಷರ ನಡುವೆ ಭಿನ್ನವಾಗಿವೆ. ಉದಾಹರಣೆಗೆ ಜೈವಿಕವಾಗಿ ವಯಸ್ಸಾದಂತೆ ಕಾಣುವ ಇಬ್ಬರು ವಿಭಿನ್ನ ಆಣ್ವಿಕ ಮಾರ್ಗಗಳ ಮೂಲಕ ಆ ಸ್ಥಿತಿಗೆ ಬಂದಿರಬಹುದು. ಆ ಸಾಧ್ಯತೆಯು ಅಂತಿಮವಾಗಿ ವೈಯಕ್ತಿಕಗೊಳಿಸಿದ ಔಷಧಕ್ಕೆ ಅಗತ್ಯವಾಗಬಹುದು.

ವಯಸ್ಸಾಗುವ ಗಡಿಯಾರ ರೋಗದ ದೂರದೃಷ್ಟಿ ಹೊಂದಬಹುದೆ?

ದೀರ್ಘಕಾಲೀನ ಆರೋಗ್ಯ ದಾಖಲೆ ಬಳಸಿ ಕೆಲವು ಜೈವಿಕ ವಯಸ್ಸಾಗುವ ಅಳತೆಗಳು ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟರಾಲ್ ಮತ್ತು ಟೈಪ್ 2 ಮಧುಮೇಹ ಸೇರಿದಂತೆ ನಂತರ ಅಭಿವೃದ್ಧಿ ಹೊಂದಿದ ಕಾಯಿಲೆಗಳೊಂದಿಗೆ ಸಂಬಂಧ ಹೊಂದಿವೆ ಎಂದು ಸಂಶೋಧಕರು ಕಂಡುಕೊಂಡರು.

ಆದಾಗಲೇ ಸೌಮ್ಯ ಅರಿವಿನ ದೌರ್ಬಲ್ಯ ಹೊಂದಿರುವ ಜನರಲ್ಲಿ ವಯಸ್ಸಾದಂತೆ ಕಾಣುವ ಮಿದುಳುಗಳನ್ನು ಹೊಂದಿರುವವರು ಅಲ್ಜೀಮರ್ ಕಾಯಿಲೆಗೆ ಪ್ರಗತಿ ಹೊಂದುವ ಸಾಧ್ಯತೆ ಹೆಚ್ಚು, ಆದರೆ ಸಂಶೋಧಕರು ಪುರುಷರು ಮತ್ತು ಮಹಿಳೆಯರನ್ನು ಹೋಲಿಸಿದಾಗ ನಡುವಿನ ವ್ಯತ್ಯಾಸ ಮಹತ್ವದ್ದಾಗಿರಲಿಲ್ಲ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor