ವಯಸ್ಸಿಗೆ ತಕ್ಕಂತೆ ಹೃದಯದ ರಕ್ಷಣೆ; ಪ್ರತಿ ದಶಕದಲ್ಲೂ ಆರೋಗ್ಯ ಕಾಪಾಡಲು ಹೃದಯ ತಜ್ಞ ಡಾ. ಡಿಮಿಟ್ರಿ ನೀಡಿದ ಐದು ಸೂತ್ರಗಳು

Update: 2026-08-15 20:52 IST

ಸಾಂದರ್ಭಿಕ ಚಿತ್ರ | Photo Credit : magnific

ಇನ್ನೂ ತಡವಾಗಿಲ್ಲ. ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯದ ಅಭ್ಯಾಸಗಳು ಮತ್ತು ಆದ್ಯತೆಗಳು ಬದಲಾಗಬೇಕು. ನಿಯಮಿತ ತಪಾಸಣೆ ಮೂಲಕ ಜೀವನಶೈಲಿಯಲ್ಲಿ ಅಗತ್ಯ ಹೊಂದಾಣಿಕೆ ಮಾಡಿಕೊಳ್ಳಬೇಕು.

ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ವಯಸ್ಸಿನ ಅಗತ್ಯವಿಲ್ಲ. ಜೀವನದ ವಿವಿಧ ಹಂತಗಳನ್ನು ಸಾಗುತ್ತಿದ್ದಂತೆ ನಿಮ್ಮ ದೇಹವು ಬದಲಾಗುತ್ತದೆ. ಅದರಂತೆ ನಿಮ್ಮ ಆರೋಗ್ಯದ ಅಭ್ಯಾಸಗಳು ಮತ್ತು ಆದ್ಯತೆಗಳೂ ಬದಲಾಗಬೇಕು. ನಿಯಮಿತ ತಪಾಸಣೆ ಮೂಲಕ ಜೀವನಶೈಲಿಯಲ್ಲಿ ಅಗತ್ಯ ಹೊಂದಾಣಿಕೆ ಮಾಡಿಕೊಳ್ಳಬೇಕು. ಆರಂಭಿಕ ಪತ್ತೆ ಮತ್ತು ತಡೆಗಟ್ಟುವ ಕ್ರಮಗಳು ದೀರ್ಘಕಾಲೀನ ಆರೋಗ್ಯಕ್ಕೆ ಸಹಾಯ ಮಾಡುತ್ತವೆ.

ಅಡ್ವಾನ್ಸ್ಡ್ ಹಾರ್ಟ್ ಫೈಲ್ಯೂರ್ ಮತ್ತು ಮೆಕಾನಿಕಲ್ ಸರ್ಕ್ಯುಲೇಟರಿ ಸಪೋರ್ಟ್‌ನಲ್ಲಿ ತಜ್ಞರಾಗಿರುವ ಕಾರ್ಡಿಯಾಲಜಿಸ್ಟ್ ಹಾಗೂ ಹಾರ್ಟ್ ಟ್ರಾನ್ಸ್‌ಪ್ಲಾಂಟ್ ವಿಶೇಷಜ್ಞ ಡಾ. ಡಿಮಿಟ್ರಿ ಯಾರನೋವ್, ಜೀವನದ ಪ್ರತಿ ದಶಕದಲ್ಲೂ ಆರೋಗ್ಯದ ಜವಾಬ್ದಾರಿ ವಹಿಸಿಕೊಂಡು ಹೃದಯವನ್ನು ರಕ್ಷಿಸಲು ಐದು ನಿಯಮಗಳನ್ನು ಹಂಚಿಕೊಂಡಿದ್ದಾರೆ. ಆಗಸ್ಟ್ 13ರಂದು ಅವರು ಇನ್‌ಸ್ಟಾಗ್ರಾಂ ವೀಡಿಯೊದಲ್ಲಿ ಈ ಬಗ್ಗೆ ಬರೆದು, ಇದರ ಮಹತ್ವವನ್ನು ಒತ್ತಿ ಹೇಳಿದ್ದಾರೆ.

20ರ ದಶಕ

20ರ ದಶಕವು ನೀವು ಆರೋಗ್ಯದ ಅಡಿಪಾಯ ಹಾಕುವ ಅವಧಿ. ಪ್ರತಿದಿನ ವ್ಯಾಯಾಮ ಮಾಡಿ, ನಡಿಗೆಯ ಅಭ್ಯಾಸ ಮಾಡಿಕೊಳ್ಳಿ. 7–9 ಗಂಟೆಗಳಷ್ಟು ಸಾಕಷ್ಟು ನಿದ್ರೆ ಮಾಡಿ. ಹೆಚ್ಚು ಸಸ್ಯಜನ್ಯ ಆಹಾರ ಸೇವಿಸಿ. ಧೂಮಪಾನ ಅಥವಾ ಮಾದಕ ದ್ರವ್ಯಗಳನ್ನು ಬಿಟ್ಟುಬಿಡಿ. ನಿಮ್ಮ ಭವಿಷ್ಯ ನಿಮಗೆ ಧನ್ಯವಾದ ಹೇಳುತ್ತದೆ.

30ರ ದಶಕ

30ರ ದಶಕದಲ್ಲಿ ಒತ್ತಡ ಮತ್ತು ನಿದ್ರೆಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಆರಂಭಿಸಿ. ಒತ್ತಡಕ್ಕೆ ಒಳಗಾಗಬೇಡಿ ಮತ್ತು ಸಾಕಷ್ಟು ನಿದ್ರೆ ಮಾಡಿ. 20 ನಿಮಿಷಗಳ ಚುರುಕಾದ ನಡಿಗೆಯೂ ಜೀವಿತಾವಧಿಯ ಆರೋಗ್ಯದ ಅಪಾಯವನ್ನು ಕಡಿಮೆ ಮಾಡಬಹುದು. ಸಾಮಾಜಿಕವಾಗಿ ಸಂಪರ್ಕದಲ್ಲಿರಿ. ಉತ್ತಮ ಸಂಬಂಧಗಳು ಒತ್ತಡ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

40ರ ದಶಕ

40ರ ದಶಕದಲ್ಲಿ ನಾವು ಚೆನ್ನಾಗಿದ್ದೇವೆ ಮತ್ತು ನಮ್ಮ ಹೃದಯವೂ ಚೆನ್ನಾಗಿದೆ ಎಂಬ ಭಾವನೆ ಇರುತ್ತದೆ. ಆದರೆ ಅದು ಸರಿಯಲ್ಲ. ರಕ್ತದೊತ್ತಡ, ಕೊಲೆಸ್ಟರಾಲ್ ಮತ್ತು ಗ್ಲೂಕೋಸ್ ಮಟ್ಟ ಸರಿಯಾಗಿರಬೇಕು. ಕುಟುಂಬದಲ್ಲಿ ಹೃದಯಾಘಾತದ ಇತಿಹಾಸವಿದ್ದರೆ ತಪಾಸಣೆ ಮಾಡಿಸಿಕೊಳ್ಳಿ. ಏಕೆಂದರೆ ಇದೇ ದಶಕದಲ್ಲಿ ಹೃದಯಕ್ಕೆ ಮೌನವಾದ ಹಾನಿ ಆರಂಭವಾಗಬಹುದು.

50ರ ದಶಕ

ಇದು ಹಾರ್ಮೋನುಗಳಲ್ಲಿ ಬದಲಾವಣೆಯಾಗುವ ಸಮಯ. ಋತುಬಂಧ, ಟೆಸ್ಟೋಸ್ಟೆರಾನ್‌ ನಲ್ಲಿನ ಬದಲಾವಣೆಗಳು ಸೇರಿದಂತೆ ಹಲವು ಕಾರಣಗಳಿಂದ ಹೃದಯದ ಅಪಾಯ ಹೆಚ್ಚಾಗುತ್ತದೆ. ಆಹಾರ, ವ್ಯಾಯಾಮ, ತರಬೇತಿ ಮತ್ತು ನಿಯಮಿತ ತಪಾಸಣೆಗಳನ್ನು ರೂಢಿಸಿಕೊಳ್ಳಬೇಕು. ಸಣ್ಣ ತಪ್ಪುಗಳೂ ವೇಗವಾಗಿ ಹೃದಯದ ಮೇಲೆ ಪರಿಣಾಮ ಬೀರಬಹುದು.

60ರ ದಶಕ

ತಡೆಗಟ್ಟುವಿಕೆ = ಸ್ವಾತಂತ್ರ್ಯ. ಅಪಧಮನಿಗಳು ಗಟ್ಟಿಯಾಗುವುದು, ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಆದರೆ ಸಕ್ರಿಯವಾಗಿರುವುದು, ಆರೋಗ್ಯ ಸ್ಥಿತಿಯನ್ನು ನಿರ್ವಹಿಸುವುದು ಮತ್ತು ಜೀವನದ ಗುಣಮಟ್ಟವನ್ನು ಕಾಪಾಡಿಕೊಳ್ಳುವುದರಿಂದ ಶಕ್ತಿಯುತ, ಸ್ವತಂತ್ರ ಹಾಗೂ ಉದ್ದೇಶಪೂರ್ಣ ಆರೋಗ್ಯಕರ ಜೀವನ ನಡೆಸಲು ಸಾಧ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News