ಬರೋಡಾ ಗ್ಲೋಬಲ್ ಶೇರ್ಡ್ ಸರ್ವಿಸಸ್ ಲಿಮಿಟೆಡ್ನಲ್ಲಿ ನೇಮಕಾತಿ; ಯಾರು ಅರ್ಜಿ ಸಲ್ಲಿಸಬಹುದು?
Photo Credit ; bgss.in
ಬರೋಡಾ ಗ್ಲೋಬಲ್ ಶೇರ್ಡ್ ಸರ್ವಿಸಸ್ ಲಿಮಿಟೆಡ್ನಲ್ಲಿ ಆಧಾರ್ ಅಪರೇಟರ್ ಮತ್ತು ಕಾರ್ಯನಿರ್ವಾಹಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಬ್ಯಾಂಕ್ ಆಫ್ ಬರೋಡಾದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿರುವ ಬರೋಡಾ ಗ್ಲೋಬಲ್ ಶೇರ್ಡ್ ಸರ್ವಿಸಸ್ ಲಿಮಿಟೆಡ್ನಲ್ಲಿ (BGSSS) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ನೀಡಲಾಗಿದೆ. ಬ್ಯಾಂಕಿಂಗ್ ಕ್ಷೇತ್ರ ಮತ್ತು ಕಾರ್ಪೋರೇಟ್ ವಲಯದಲ್ಲಿ ಕೆಲಸ ಹುಡುಕುತ್ತಿರುವವರಿಗೆ ಸುವರ್ಣಾವಕಾಶ ದೊರೆತಿದೆ. ಸಂಸ್ಥೆಯು ಆಧಾರ್ ಅಪರೇಟರ್ ಮತ್ತು ಕಾರ್ಯನಿರ್ವಾಹಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಲಿಂಕ್ ಬಳಸಿ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಬಹುದು: https://www.bgss.in/careers/all
📌ಹುದ್ದೆಗಳ ವಿವರಗಳು
ಸಂಸ್ಥೆಯ ಹೆಸರು : ಬರೋಡಾ ಗ್ಲೋಬಲ್ ಶೇರ್ಡ್ ಸರ್ವೀಸಸ್ ಲಿಮಿಟೆಡ್
ಹುದ್ದೆಗಳ ಸಂಖ್ಯೆ: ವಿವಿಧ
ಹುದ್ದೆಯ ಹೆಸರು: ಆಧಾರ್ ಆಪರೇಟರ್, ಕಾರ್ಯನಿರ್ವಾಹಕ
ಉದ್ಯೋಗ ಸ್ಥಳ: ಅಖಿಲ ಭಾರತ
📌ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 01 ಜುಲೈ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25 ಜುಲೈ 2026
📌ಶೈಕ್ಷಣಿಕ ಅರ್ಹತೆ ಮತ್ತು ಅನುಭವ
ಪಿಯುಸಿ ಪಾಸಾದ ನಂತರ ಯಾವುದೇ NSCIT (ಆಧಾರ್ ಪರೀಕ್ಷೆ) ಪ್ರಮಾಣಪತ್ರವನ್ನು (ಸಕ್ರಿಯವಾಗಿರುವ) ಹೊಂದಿರಬೇಕು. ಸ್ಥಳೀಯ ಭಾಷೆ ತಿಳಿದಿರಬೇಕು. ಆಧಾರ್ ನೋಂದಣಿ ಸಂದರ್ಭದಲ್ಲಿ ದೀರ್ಘಕಾಲ ಕೆಲಸ ಮಾಡಿದ ಅನುಭವವಿದ್ದರೆ ಒಳಿತು.
📌ವಯೋಮಿತಿ
ಈ ಹುದ್ದೆಗೆ ಯಾವುದೇ ವಯೋಮಿತಿ ನಿಗದಿಪಡಿಸಿಲ್ಲ
📌ಅರ್ಜಿ ಶುಲ್ಕ
ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ
📌ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
📌ಅರ್ಜಿ ಸಲ್ಲಿಸುವುದು ಹೇಗೆ?
• ಮೊದಲಿಗೆ ನೀವು ಬರೋಡಾ ಗ್ಲೋಬಲ್ ಶೇರ್ಡ್ ಸರ್ವೀಸಸ್ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್‌ಗೆ ( https://www.bgss.in ) ಭೇಟಿ ನೀಡಬೇಕು.
• ಅಲ್ಲಿ ನೀಡಿರುವ Careers ಲಿಂಕ್ ಕ್ಲಿಕ್ ಮಾಡಿ, ಅಧಿಕೃತ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿಕೊಳ್ಳಿ.
• ಅರ್ಜಿ ಭರ್ತಿ ಮಾಡುವ ಮುನ್ನ ನಿಮ್ಮ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್/ಐಡಿ ಪ್ರೂಫ್, ಶೈಕ್ಷಣಿಕ ದಾಖಲೆಗಳು ಮತ್ತು ಅಪ್ಡೇಟ್ ಆಗಿರುವ ರೆಸ್ಯೂಮ್ ಸಿದ್ಧವಾಗಿಟ್ಟುಕೊಳ್ಳಿ.
• ಆನ್‌ಲೈನ್ ಫಾರ್ಮ್‌ನಲ್ಲಿ ಕೇಳಲಾಗಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ನಿಮ್ಮ ಇತ್ತೀಚಿನ ಫೋಟೋ ಹಾಗೂ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
• ಕೊನೆಯದಾಗಿ ಮತ್ತೊಮ್ಮೆ ಪರಿಶೀಲಿಸಿ ‘Submit’ ಬಟನ್ ಒತ್ತುವ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಿ. ಭವಿಷ್ಯದ ಉಲ್ಲೇಖಕ್ಕಾಗಿ ಅಪ್ಲಿಕೇಶನ್ ನಂಬರ್ ಸೇವ್ ಮಾಡಿಟ್ಟುಕೊಳ್ಳಿ.