×
Ad

ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ; ಯಾರು ಅರ್ಜಿ ಸಲ್ಲಿಸಬಹುದು?

Update: 2026-06-23 20:01 IST

ಸಾಂದರ್ಭಿಕ ಚಿತ್ರ

ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಗೆ ಹೋಗಿ “Apply Online” ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.

ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಬಯಸುವವರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಈ ಅಧಿಸೂಚನೆಯತ್ತ ಗಮನಹರಿಸಬಹುದು. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಹಯೋಗದೊಂದಿಗೆ 2026ನೇ ಸಾಲಿನ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (CAR/DAR) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಮುಂದಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು: https://cetonline.karnataka.gov.in/kea/indexnew

📌ಹುದ್ದೆಯ ವಿವರಗಳು

* ಸಂಸ್ಥೆಯ ಹೆಸರು: ಕರ್ನಾಟಕ ರಾಜ್ಯ ಪೊಲೀಸ್

* ಹುದ್ದೆಯ ಹೆಸರು: ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (CAR/DAR)

* ಒಟ್ಟು ಹುದ್ದೆಗಳು: 1600

ಆರ್ಪಿಸಿ– 1421

ಕೆಕೆ – 179

* ಉದ್ಯೋಗ ಸ್ಥಳ: ಕರ್ನಾಟಕ

📌ಪ್ರಮುಖ ದಿನಾಂಕಗಳು:

* ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 22 ಜೂನ್ 2026

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22 ಜುಲೈ 2026

* ಪರೀಕ್ಷೆಯ ದಿನಾಂಕ: 06 ಸೆಪ್ಟೆಂಬರ್ 2026

📌ವಿದ್ಯಾರ್ಹತೆ

* ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಿಯುಸಿ ಪೂರ್ಣಗೊಳಿಸಿರಬೇಕು.

📌ವೇತನ

* ಮಾಸಿಕವೇತನ: 37,500-76,100 ರೂ. ವರೆಗೆ ನೀಡಲಾಗುತ್ತದೆ

📌ವಯೋಮಿತಿ

* ಕನಿಷ್ಠ ವಯಸ್ಸು: 18 ವರ್ಷಗಳು

* ಗರಿಷ್ಠ ವಯಸ್ಸು: 33 ವರ್ಷಗಳು

📌ವಯೋಮಿತಿ ಸಡಿಲಿಕೆ

* ಒಬಿಸಿ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು: 02 ವರ್ಷಗಳು

* ಎಸ್ಸಿ/ಎಸ್ಟಿ ಅಭ್ಯರ್ಥಿಗಳು: 05 ವರ್ಷಗಳು

* ಪಿಡಬ್ಲ್ಯೂಡಿ ಅಭ್ಯರ್ಥಿಗಳು: 10 ವರ್ಷಗಳು

📌ಅರ್ಜಿ ಶುಲ್ಕ

* ಸಾಮಾನ್ಯ, OBC, 2A, 2B, 3A, 3B ಅಭ್ಯರ್ಥಿಗಳಿಗೆ: 750 ರೂ.

* ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ: 500 ರೂ.

📌ಆಯ್ಕೆ ಪ್ರಕ್ರಿಯೆ

* ಲಿಖಿತ ಪರೀಕ್ಷೆ

* ಸಹಿಷ್ಣುತೆ ಪರೀಕ್ಷೆ

* ದೈಹಿಕ ಗುಣಮಟ್ಟದ ಪರೀಕ್ಷೆ

* ವೈದ್ಯಕೀಯ ಪರೀಕ್ಷೆ

📌ಅರ್ಜಿ ಸಲ್ಲಿಸುವ ವಿಧಾನ

* ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ.

* ನಿಮ್ಮ ಆದ್ಯತೆಗೆ ಅನುಗುಣವಾಗಿ KK ಅಥವಾ RPC ವಲಯದ ಸಕ್ರಿಯ ಲಿಂಕ್ ಅನ್ನು ಆಯ್ಕೆ ಮಾಡಿ.

* ಅಧಿಕೃತ ಪಿಡಿಎಫ್ (PDF) ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ, ನಿಮ್ಮ ಅರ್ಹತೆಯನ್ನು ಸಂಪೂರ್ಣವಾಗಿ ಓದಿ ಖಚಿತಪಡಿಸಿಕೊಳ್ಳಿ.

* “Apply Online” ಲಿಂಕ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.

* ನಿಮ್ಮ ಇತ್ತೀಚಿನ ಭಾವಚಿತ್ರ, ಸಹಿ ಮತ್ತು ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.

* ನಿಮ್ಮ ಪ್ರವರ್ಗಕ್ಕೆ ಅನುಗುಣವಾಗಿ ಆನ್‌ಲೈನ್ ಪೇಮೆಂಟ್ ಗೇಟ್‌ವೇ ಬಳಸಿ ಅರ್ಜಿ ಶುಲ್ಕವನ್ನು ಪಾವತಿಸಿ.

* ಫಾರ್ಮ್ ಅನ್ನು ಸಬ್ಮಿಟ್ ಮಾಡುವ ಮುನ್ನ ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ, ನಂತರ ಪ್ರಿಂಟೌಟ್ ಪಡೆದು ಇಟ್ಟುಕೊಳ್ಳಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News