×
Ad

ಭಾರತೀಯ ರೈಲ್ವೇ ನೇಮಕಾತಿ ಮಂಡಳಿ ನೇಮಕಾತಿ; ಯಾರು ಅರ್ಜಿ ಸಲ್ಲಿಸಬಹುದು?

Update: 2026-07-02 14:58 IST

Photo Credit : PTI , Indian Railways Logo

ಐಟಿಐ, ಡಿಪ್ಲೊಮಾ ಮೊದಲಾಗಿ ವಿದ್ಯಾರ್ಹತೆ ಹೊಂದಿದ ಯುವಕ-ಯುವತಿಯರಿಗೆ ರೈಲ್ವೇಯಲ್ಲಿ ಕೆಲಸ ಮಾಡುವ ಅವಕಾಶ ನೀಡುತ್ತಿದೆ.

ಭಾರತೀಯ ರೈಲ್ವೇ ನೇಮಕಾತಿ ಮಂಡಳಿಯು ದೇಶಾದ್ಯಂತ ಖಾಲಿ ಇರುವ ಸುಮಾರು 6,557 ತಂತ್ರಜ್ಞ ದರ್ಜೆ-3 (Technician Grade III) ಹುದ್ದೆಗಳ ಭರ್ತಿಗೆ ಬೃಹತ್ ಅಧಿಸೂಚನೆ ಹೊರಡಿಸಿದೆ. ಐಟಿಐ, ಡಿಪ್ಲೊಮಾ ಮೊದಲಾಗಿ ವಿದ್ಯಾರ್ಹತೆ ಹೊಂದಿದ ಯುವಕ-ಯುವತಿಯರಿಗೆ ರೈಲ್ವೇಯಲ್ಲಿ ಕೆಲಸ ಮಾಡುವ ಅವಕಾಶ ನೀಡುತ್ತಿದೆ.

📌ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 30 ಜೂನ್ 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಜುಲೈ 2026

ಅರ್ಜಿ ಶುಲ್ಕ ಪಾವತಿಸಲು ಕಡೆಯ ದಿನಾಂಕ: 31 ಜುಲೈ 2026

📌ಉದ್ಯೋಗದ ಪ್ರಮುಖ ವಿವರಗಳು

ಸಂಸ್ಥೆಯ ಹೆಸರು: ರೈಲ್ವೆ ನೇಮಕಾತಿ ಮಂಡಳಿ (RRB)

ಹುದ್ದೆಯ ಹೆಸರು: ತಂತ್ರಜ್ಞ ದರ್ಜೆ-III (Technician Grade III)

ಒಟ್ಟು ಹುದ್ದೆಗಳು: 6,557

ಉದ್ಯೋಗ ಸ್ಥಳ: ಅಖಿಲ ಭಾರತ

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್

📌ವೇತನ

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 19,900 ರೂ.ರಿಂದ 29,200 ರೂ. ವರೆಗೆ ವೇತನ ಶ್ರೇಣಿ ಸಿಗಲಿದೆ.

📌ವಿದ್ಯಾರ್ಹತೆ ಏನಾಗಿರಬೇಕು?

10ನೇ ತರಗತಿ ಪಾಸ್ ಜೊತೆಗೆ ITI ಮುಗಿಸಿರಬೇಕು. ಅಥವಾ ಸಂಬಂಧಪಟ್ಟ ವಿಭಾಗದಲ್ಲಿ ಡಿಪ್ಲೊಮಾ /ಬಿಎಸ್ಸಿ / ಬಿಇ / ಬಿಟೆಕ್ ಅಥವಾ ಯಾವುದೇ ಪದವಿ ಪಡೆದವರೂ ಅರ್ಹರು.

📌ವಯಸ್ಸಿನ ಮಿತಿ ಎಷ್ಟು?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 33 ವರ್ಷ ಮೀರಿರಬಾರದು.

📌ವಯೋಮಿತಿ ಸಡಿಲಿಕೆ

ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷಗಳು

ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ: 5 ವರ್ಷಗಳು

PwBD (ಅಂಗವಿಕಲ) ಅಭ್ಯರ್ಥಿಗಳಿಗೆ: 10 ರಿಂದ 15 ವರ್ಷಗಳವರೆಗೆ ಸಡಿಲಿಕೆ ಇರಲಿದೆ.

📌ಅರ್ಜಿ ಶುಲ್ಕದ ವಿವರ

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ: 500 ರೂ.

ಎಸ್ಸಿ/ಎಸ್ಟಿ, ಮಹಿಳೆಯರು, ಮಾಜಿ ಸೈನಿಕರು & ಇಬಿಸಿ ಅಭ್ಯರ್ಥಿಗಳಿಗೆ: 250 ರೂ.

(ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕಿರುತ್ತದೆ).

📌ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹೇಗೆ?

1. ಸಿಬಿಟಿ ಪರೀಕ್ಷೆ: ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ.

2. ದಾಖಲೆಗಳ ಪರಿಶೀಲನೆ: ಮೂಲ ದಾಖಲಾತಿಗಳ ವೆರಿಫಿಕೇಶನ್.

3. ಸಂದರ್ಶನ/ ವೈದ್ಯಕೀಯ ತಪಾಸಣೆ.

📌ಅರ್ಜಿ ಸಲ್ಲಿಸುವುದು ಹೇಗೆ?

• ಮೊದಲಿಗೆ ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್ indianrailways.gov.in ಗೆ ಭೇಟಿ ನೀಡಿ.

• ಅಲ್ಲಿ ‘Recruitment’ ಅಥವಾ ‘Careers’ ಸೆಕ್ಷನ್‌ನಲ್ಲಿ Technician Grade III ಲಿಂಕ್ ಕ್ಲಿಕ್ ಮಾಡಿ.

• ಅಧಿಸೂಚನೆಯನ್ನು ಸರಿಯಾಗಿ ಓದಿ. ನಿಮ್ಮ ಎಲ್ಲಾ ವಿವರಗಳನ್ನು ಯಾವುದೇ ತಪ್ಪುಗಳಿಲ್ಲದೆ ಭರ್ತಿ ಮಾಡಿ.

• ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ನಿಮ್ಮ ವಿಭಾಗಕ್ಕೆ ತಕ್ಕಂತೆ ಅರ್ಜಿ ಶುಲ್ಕ ಪಾವತಿಸಿ.

• ಕೊನೆಯಲ್ಲಿ ಅರ್ಜಿಯನ್ನು ಸಲ್ಲಿಸಿ. ಮುಂದಿನ ರೆಫರೆನ್ಸ್‌ಗಾಗಿ ಅಪ್ಲಿಕೇಶನ್ ಮುದ್ರಿಸಿಟ್ಟುಕೊಳ್ಳಿ ಅಥವಾ ಅಕ್ನಾಲೆಡ್ಜ್‌ಮೆಂಟ್ ನಂಬರ್ ಉಳಿಸಿಡಿ.

ಅರ್ಹ ಅಭ್ಯರ್ಥಿಗಳು ಈ ಮುಂದಿನ ಲಿಂಕ್‌ನಲ್ಲಿ ಅರ್ಜಿ ಸಲ್ಲಿಸಬಹುದು: https://www.rrbapply.gov.in/#/auth/landing

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News